ವಿತ್ತ ಸಚಿವ ಅರುಣ್ ಜೇಟ್ಲಿ (ಸಂಗ್ರಹ ಚಿತ್ರ) 
ದೇಶ

ಜನ ಕಲ್ಯಾಣಕ್ಕೆ "ಕಪ್ಪುಹಣ"; ಶೇ.30ರಷ್ಟು ಹಣ ಬಡವರ ಕಲ್ಯಾಣ ಯೋಜನೆಗಳಿಗೆ ಬಳಕೆ

ಕಾಳಧನಿಕರು ತಮ್ಮ ಬಳಿ ಇರುವ ಕಪ್ಪುಹಣ ಬಿಳಿಯಾಗಿಸಲು ಕೇಂದ್ರ ಸರ್ಕಾರ ಮತ್ತೊಂದು ಅವಕಾಶ ನೀಡಿದ್ದು, ಈಗಲೇ ಕಪ್ಪುಹಣ ಘೋಷಣೆ ಮಾಡಿದರೆ ಶೇ.50ರಷ್ಟು ತೆರಿಗೆಯೊಂದಿಗೆ ಆಘೋಷಿತ ಮೊತ್ತ ಬಿಳಿಯಾಗಲಿದೆ.

ನವದೆಹಲಿ: ಕಾಳಧನಿಕರು ತಮ್ಮ ಬಳಿ ಇರುವ ಕಪ್ಪುಹಣ ಬಿಳಿಯಾಗಿಸಲು ಕೇಂದ್ರ ಸರ್ಕಾರ ಮತ್ತೊಂದು ಅವಕಾಶ ನೀಡಿದ್ದು, ಈಗಲೇ ಕಪ್ಪುಹಣ ಘೋಷಣೆ ಮಾಡಿದರೆ ಶೇ.50ರಷ್ಟು ತೆರಿಗೆಯೊಂದಿಗೆ ಆಘೋಷಿತ ಮೊತ್ತ  ಬಿಳಿಯಾಗಲಿದೆ.

ಕೇಂದ್ರ ಸರ್ಕಾರದ ಪ್ರಸ್ತಾವಿತ ನೂತನ ಮಸೂದೆಯಲ್ಲಿ ಕಪ್ಪುಹಣ ಹೊರಗೆಳೆಯಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಈ ಪೈಕಿ ಸ್ವಯಂ ಪ್ರೇರಿತವಾಗಿ ಕಪ್ಪುಹಣ ಅಥವಾ ಅಘೋಷಿತ ಹಣವನ್ನು ತೆರಿಗೆ ಇಲಾಖೆ ಎದುರು  ಘೋಷಿಸಿಕೊಂಡರೆ ಶೇ.50 ತೆರಿಗೆ ಪಾವತಿಸಿ, ಉಳಿದ ಹಣವನ್ನು ಸಕ್ರಮಗೊಳಿಸಲು ಕೇಂದ್ರ ಸರ್ಕಾರ ಮಸೂದೆಯಲ್ಲಿ ಅವಕಾಶ ನೀಡಿದೆ. ಒಂದು ವೇಳೆ ಈ ಅವಧಿಯಲ್ಲೂ ಕಪ್ಪುಹಣ ಘೋಷಣೆ ಮಾಡದವರ ವಿರುದ್ಧ ಕೇಂದ್ರ  ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದ್ದು, ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ವೇಳೆ ಸಿಕ್ಕಿಬಿದ್ದ ಕಾಳಧನಿಕರಿಗೆ ಶೇ.75ರಷ್ಟು ತೆರಿಗೆ ಮತ್ತು ಶೇ.10ರಷ್ಟು ಹಣವನ್ನು ದಂಡವಾಗಿ ವಿಧಿಸುವ ಕಠಿಣ ಕಾನೂನು ಜಾರಿಗೆ ನಿರ್ಧರಿಸಿದೆ ಎಂದು  ಹೇಳಲಾಗುತ್ತಿದೆ.

ಇನ್ನು ಸ್ವಯಂಘೋಷಿತ ಕಾಳಧನಿಕರಿಂದ ಬಂದ ತೆರಿಗೆ ಹಣದ ಪೈಕಿ ಶೇ.33ರಷ್ಟು ಹಣವನ್ನು ಬಡವರ ಕಲ್ಯಾಣ ಯೋಜನೆಗೆ ಬಳಕೆಕೊಳ್ಳಲಾಗುತ್ತದೆ. ಉಳಿದ ಶೇ.25ರಷ್ಟು ಹಣವನ್ನು ಆರ್ ಬಿಐ ನಿಗದಿ ಪಡಿಸಿದ ಯೋಜನೆಯಲ್ಲಿ  ಹೂಡಿಕೆ ಮಾಡಲಾಗುತ್ತದೆ. ಹೀಗೆ ಕಾಳಧನಿಕರಿಂದ ಸರ್ಕಾರದ ಬೊಕ್ಕಸ ಸೇರುವ ಹಣವನ್ನು ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದವರು, ದುರ್ಬಲರ ಅಭಿವೃದ್ಧಿಗಾಗಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಜಾರಿಗೆ  ಮುಂದಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಾಕಿಸ್ತಾನ-ಅಫ್ಘಾನಿಸ್ತಾನ ಯುದ್ಧ: 58 ಪಾಕ್ ಸೈನಿಕರು ಹತ, ತಾಲಿಬಾನ್ ಸರ್ಕಾರದ 'ದೊಡ್ಡ' ಹೇಳಿಕೆ

ಭಾರತ- ಬಾಂಗ್ಲಾದೇಶ ಗಡಿ: ರೂ. 2.82 ಕೋಟಿ ಮೌಲ್ಯದ 'ಚಿನ್ನದ ಬಿಸ್ಕತ್ತು' ಜೊತೆಗೆ ಕಳ್ಳಸಾಗಣೆದಾರನನ್ನು ಬಂಧಿಸಿದ BSF!

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

'ಬ್ಲೂ ಸ್ಟಾರ್ ಆಪರೇಷನ್' ಕಾರ್ಯಾಚರಣೆ ತಪ್ಪಿಗೆ ಇಂದಿರಾ ಗಾಂಧಿ ಪ್ರಾಣ ತೆತ್ತರು: ಪಿ ಚಿದಂಬರಂ

ದೇಶದ ಮುಸ್ಲಿಂರನ್ನು ಗುರಿಯಾಗಿಸಿಕೊಳ್ಳುವ ಬಿಜೆಪಿ ಅಫ್ಘಾನಿಸ್ತಾನದ ಜೊತೆ ಸಂಬಂಧ ಬೆಳೆಸುವುದು 'ಬೂಟಾಟಿಕೆ': ಮೆಹಬೂಬಾ ಮುಫ್ತಿ

SCROLL FOR NEXT