ದೇಶ

ಪಾಕ್ ವಶದಲ್ಲಿರುವ ಯೋಧನ ವಾಪಸ್ ಕರೆತರಲು ಸಕಲ ಪ್ರಯತ್ನ: ಮನೋಹರ್ ಪರಿಕ್ಕರ್

Srinivasamurthy VN

ನವದೆಹಲಿ: ಪಾಕಿಸ್ತಾನ ಸೇನೆ ವಶದಲ್ಲಿರುವ ಭಾರತೀಯ ಯೋಧನನ್ನು ಸುರಕ್ಷಿತವಾಗಿ ಕರೆತರಲು ಸಕಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ್  ಪರಿಕ್ಕರ್ ಅವರು ಹೇಳಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪರಿಕ್ಕರ್ ಅವರು, ಪ್ರಸ್ತುತ ಉಭಯ ದೇಶಗಳ ನಡುವೆ ಬಿಗುವಿನ ವಾತಾವರಣವಿದೆ. ಹೀಗಾಗಿ ಯೋಧನನ್ನು ವಾಪಸ್ ಕರೆತರಲು ಮತ್ತಷ್ಟು  ದಿನ ಕಾಯಬೇಕಾಗುತ್ತದೆ ಎಂದು ಹೇಳಿದ್ದಾರೆ. "ಡಿಜಿಎಂಒ ಮೂಲಕ ಯೋಧನನ್ನು ದೇಶಕ್ಕೆ ವಾಪಸ್ ಕರೆತರುವ ಕುರಿತು ಈಗಾಗಲೇ ಪ್ರಯತ್ನಗಳನ್ನು ಆರಂಭಿಸಲಾಗಿದೆ. ಇಂತಹ ಕೆಲಸಗಳಿಗೆ  ತನ್ನದೇ ಪ್ರಕ್ರಿಯೆಗಳಿದ್ದು, ಅದೇ ವ್ಯವಸ್ಥೆ ಮೂಲಕ ನಾವು ಮುಂದುವರೆಯಬೇಕಾಗುತ್ತದೆ. ಉದ್ದೇಶಪೂರ್ವಕವಲ್ಲದೇ ಅಥವಾ ಅಚಾತುರ್ಯವಾಗಿ ಗಡಿ ದಾಟಿ ಬಂಧಿತರಾಗಿರುವ ಯೋಧರನ್ನು  ಗುರುತಿಸಿ ಪರಸ್ಪರ ವಿನಿಮಯ ಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಇದೇ ವೇಳೆ ಗಡಿಯಲ್ಲಿ ಘೋಷಣೆಯಾಗಿರುವ ಹೈಅಲರ್ಟ್ ಕುರಿತಂತೆ ಮಾತನಾಡಿದ ಪರಿಕ್ಕರ್ ಅವರು, ಗಡಿಯಲ್ಲಿ ಯಾವುದೇ ರೀತಿಯ ಸಂಶಯಾಸ್ಪದ ಘಟನೆಗಳು ನಡೆದರೆ ಅದನ್ನೂ  ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಗಡಿ ಭಾಗದ ಗ್ರಾಮಸ್ಥರಿಗೆ ಪರಿಕ್ಕರ್ ಮನವಿ ಮಾಡಿದರು.

SCROLL FOR NEXT