ದೇಶ

ನಿಗದಿತ ಗಡುವಿಗಿಂತ ಬೇಗ ಭಾರತದ ಕೈ ಸೇರಲಿರುವ ರಾಫೆಲ್ ಜೆಟ್ ಗಳು!

Srinivas Rao BV

ಪುಣೆ: ನೆರೆ ರಾಷ್ಟ್ರಗಳೊಂದಿಗಿನ ಪರಿಸ್ಥಿತಿಗಳು ಉದ್ವಿಗ್ನಗೊಂಡಿದ್ದು, ನಿಗದಿತ ಗಡುವಿಗಿಂತ ಬೇಗ ರಫೆಲ್ ಜೆಟ್ ಗಳು ಭಾರತದ ಕೈ ಸೇರುವ ನಿರೀಕ್ಷೆ ಇದೆ.

ರಾಫೆಲ್ ಜೆಟ್ ಗಳು ನಿರೀಕ್ಷೆಗಿಂತ ಬೇಗ ಭಾರತಕ್ಕೆ ಸಿಗುವುದರ ಬಗ್ಗೆ ಸುಳಿವು ನೀಡಿರುವ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, 36 ತಿಂಗಳಲ್ಲಿ ರಾಫೆಲ್ ಜೆಟ್ ಗಳು ಭಾರತದ ಕೈ ಸೇರುವ ನಿರೀಕ್ಷೆ ಇತ್ತು. ಆದರೆ ಈಗ ಅದಕ್ಕಿಂತ ಬೇಗವೇ ರಾಫೆಲ್ ಜೆಟ್ ಗಳು ಭಾರತದ ಕೈ ಸೇರುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.

36 ರಾಫೆಲ್ ಜೆಟ್ ಗಳ ಖರೀದಿ ಒಪ್ಪಂದಕ್ಕೆ ಸೆ.23 ಭಾರತ ಫ್ರಾನ್ಸ್ ನೊಂದಿಗೆ ಸಹಿ ಹಾಕಿತ್ತು. ಒಪ್ಪಂದದ ಪ್ರಕಾರ 36 ತಿಂಗಳಲ್ಲಿ ಅಷ್ಟೂ ರಾಫೆಲ್ ಜೆಟ್ ಗಳು ಭಾರತಕ್ಕೆ ಬರಬೇಕಿತ್ತು. ಆದರೆ ಈಗಿನ ಮಾಹಿತಿ ಪ್ರಕಾರ 36 ತಿಂಗಳಿಗೂ ಮುನ್ನವೇ 36 ರಾಫೆಲ್ ಜೆಟ್ ಗಳು ಭಾರತದ ಕೈಸೇರಲಿವೆ ಎಂದು ಹೇಳಲಾಗುತ್ತಿದೆ.

SCROLL FOR NEXT