ಗಯಾ: ಹಾಡಹಗಲೇ ಪೊಲೀಸ್ ಅಧಿಕಾರಿಯನ್ನು ನಕ್ಸಲರು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಬಿಹಾರದ ಗಯಾದಲ್ಲಿ ನಡೆದಿದೆ.
ಕೊಟ್ಚಿ ಠಾಣೆಯ ಅನ್ಸಾರಿ ಎಂಬ ಪೊಲೀಸ್ ಅಧಿಕಾರಿಯ ಮೇಲೆ. ಬೈಕ್ ನಲ್ಲಿ ಬಂದ ಶಂಕಿತ ನಕ್ಸಲರು ಗುಂಡಿನ ದಾಳಿ ನಡೆಸಿದ್ದರಿಂದ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಡಿಜಿಪಿ ಸೌರಬ್ ಕುಮಾರ್ ಹೇಳಿದ್ದಾರೆ.
ಕೊಟ್ಚಿ ಗಯಾದಿಂದ ಸುಮಾರು 125 ಕಿಮೀ ದೂರದಲ್ಲಿದ್ದು, ದಾಳಿ ನಡೆಯುವಾಗ ಅನ್ಸಾರಿ ಬೆಳಗಿನ ವಾಯು ವಿಹಾರಕ್ಕೆ ತೆರಳಿದ್ದರು ಎಂದು ಅವರು ಹೇಳಿದ್ದಾರೆ. ಸ್ಥಳಕ್ಕೆ ಅರೆಸೇನಾ ಪಡೆ ಮತ್ತು ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ.