ದೇಶ

'ಸೀಮಿತ ದಾಳಿ ಸಾಬೀತು ಪಡಿಸಿ'; ಕೇಜ್ರಿವಾಲ್ ಗೆ ಪಾಕ್ ಮಾಧ್ಯಮಗಳ ಹೊಗಳಿಕೆಯ ಮಹಾಪೂರ!

Srinivas Rao BV

ನವದೆಹಲಿ: ಭಾರತೀಯ ಸೇನೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಸಿಮೀತ ದಾಳಿ ನಡೆಸಿರಿಯುವ ಬಗ್ಗೆ ಸಾಕ್ಷ್ಯ ಬಹಿರಂಗಪಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸದ್ಯಕ್ಕೆ ಪಾಕಿಸ್ತಾನದ ಮಾಧ್ಯಮಗಳ ಹೀರೊ ಆಗಿದ್ದಾರೆ.

ಸೀಮಿತ ದಾಳಿ ನಡೆದಿಲ್ಲ ಎನ್ನುವುದಕ್ಕೆ ಸಾಕ್ಷ್ಯಗಳನ್ನು ಹುಡುಕಲು ಹೆಣಗಾಡುತ್ತಿರುವ ಪಾಕಿಸ್ತಾನಕ್ಕೆ ಅರವಿಂದ್ ಕೇಜ್ರಿವಾಲ್ ಹೇಳಿಕೆ ರಕ್ಷಣೆಗೆ ಧಾವಿಸಿದಂತಾಗಿದ್ದು, ಪ್ರಧಾನಿ ನರೇಂದ್ರ ಮೋದಿಗೆ ಸೀಮಿತ ದಾಳಿ ಬಗ್ಗೆ ಸಾಕ್ಷ್ಯ ಬಹಿರಂಗಪಡಿಸಲು ಸವಾಲು ಹಾಕಿರುವ ಅರವಿಂದ್ ಕೇಜ್ರಿವಾಲ್ ಅವರನ್ನು ಪಾಕ್ ಮಾಧ್ಯಮಗಳು ಹಾದಿ ಹೊಗಳಲು ಪ್ರಾರಂಭಿಸಿವೆ.

ಅರವಿಂದ್ ಕೇಜ್ರಿವಾಲ್ ಅವರನ್ನು ಹೀರೊ ಎಂದು ಬಣ್ಣಿಸಿರುವ ಪಾಕ್ ಮಾಧ್ಯಮಗಳು, ಎನ್ ಡಿಎ ಸರ್ಕಾರದ ಮೇಲೆ ಒತ್ತಡ ಹೇರಿರುವ ಅರವಿಂದ್ ಕೇಜ್ರಿವಾಲ್, ಸೀಮಿತ ದಾಳಿ ನಡೆಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಾಕ್ಷ್ಯಾಧಾರಗಳನ್ನು ಕೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಕಳೆದ ಭಾರತೀಯ ಸೇನೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಏಳು ಉಗ್ರರ ಶಿಬಿರಗಳ ಮೇಲೆ ದಾಳಿ ನಡೆಸಿ 40ಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಿತ್ತು. ಇದನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಪಾಕಿಸ್ತಾನ ತನ್ನ ಪ್ರದೇಶದಲ್ಲಿ ಯಾವುದೇ ದಾಳಿ ನಡೆದಿಲ್ಲ. ಆದರೆ ಗಡಿಯಾಚೆ ಗುಂಡಿನ ದಾಳಿ ನಡೆದಿದೆ ಎಂದು ಹೇಳಿತ್ತು.

ಪಾಕಿಸ್ತಾನ ಮಾಧ್ಯಮಗಳ ವರದಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅರವಿಂದ್ ಕೇಜ್ರಿವಾಲ್, ಭಾರತದ ಸೀಮಿತ ದಾಳಿಯನ್ನು ಪ್ರಶ್ನಿಸುತ್ತಿರುವ ವಿದೇಶಿ ಮಾಧ್ಯಮಗಳ ವರದಿಗಳನ್ನು ನೋಡಿ ನನ್ನ ರಕ್ತ ಕುದಿಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

SCROLL FOR NEXT