ಉಗ್ರರಿಂದ ಜಪ್ತಿ ಮಾಡಿದ ಗ್ರೆನೇಡ್ 
ದೇಶ

ಉಗ್ರರಿಂದ ಪಾಕಿಸ್ತಾನ ಗುರುತು ಹೊಂದಿರುವ ಗ್ರೆನೇಡ್ ಜಪ್ತಿ: ಸೇನೆ

ನೌಗಮ್ ಕಾರ್ಯಾಚರಣೆ ವೇಳೆ ಹತ್ಯೆಯಾದ ಉಗ್ರರಿಂದ ವಶಪಡಿಸಿಕೊಂಡ ಗ್ರೆನೇಡ್ ಗಳು ಪಾಕಿಸ್ತಾನದ್ದು ಎಂದು ಭಾರತೀಯ ಸೇನೆ...

ನವದೆಹಲಿ: ನೌಗಮ್ ಕಾರ್ಯಾಚರಣೆ ವೇಳೆ ಹತ್ಯೆಯಾದ ಉಗ್ರರಿಂದ ವಶಪಡಿಸಿಕೊಂಡ ಗ್ರೆನೇಡ್ ಗಳು ಪಾಕಿಸ್ತಾನದ್ದು ಎಂದು ಭಾರತೀಯ ಸೇನೆ ಶನಿವಾರ ಹೇಳಿದೆ.
ಕಳೆದ ಗುರುವಾರ ನೌಗಮ್ ಸೆಕ್ಟರ್ ನಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಗಡಿ ನಿಯಂತ್ರ ರೇಖೆ ಪ್ರವೇಶಿಸಲು ಯತ್ನಿಸುತ್ತಿದ್ದ ನಾಲ್ವರು ಉಗ್ರರರನ್ನು ಭಾರತೀಯ ಸೇನೆ ಹೊಡೆದುರಿಳಿಸಿತ್ತು. ಈ ವೇಳೆ ಉಗ್ರರಿಂದ ವಶಪಡಿಸಿಕೊಳ್ಳಲಾದ ಹ್ಯಾಂಡ್ ಗ್ರೆನೇಡ್ ಹಾಗೂ ಯುಬಿಜಿಎಲ್ ಗ್ರೆನೇಡ್ ಗಳ ಮೇಲೆ ಪಾಕಿಸ್ತಾನ ಕಂಪನಿಯ ಗುರುತುಗಳಿವೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.
ಉಗ್ರರಿಂದ ವಶಪಡಿಸಿಕೊಳ್ಳಲಾದ ಔಷಧಿ ಹಾಗೂ ಆಹಾರ ಪದಾರ್ಥಗಳ ಮೇಲೆಯೂ ಪಾಕ್ ಮೂಲದ ಕಂಪನಿಗಳ ಗುರುತಗಳಿವೆ ಎಂದು ಅವರು ಹೇಳಿದ್ದಾರೆ.
ಆರು ಗ್ರೆನೇಡ್, ಆರು ಪ್ಲಾಸ್ಟಿಕ್ ಸ್ಫೋಟಕಗಳು, ಆರು ಪೆಟ್ರೋಲಿಯಂ ಜೆಲ್ಲಿ ಬಾಟಲಿ ಸೇರಿದಂತೆ ಹಲವು ಸ್ಫೋಟಕ ವಸ್ತುಗಳನ್ನು ಅಕ್ಟೋಬರ್ 6ರಂದು ಸೇನೆ ಜಪ್ತಿ ಮಾಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ರೂ. ಲೂಟಿ; ಸಂತೋಷ್ ಲಾಡ್ ರಾಜೀನಾಮೆಗೆ ಆರಗ ಜ್ಞಾನೇಂದ್ರ ಆಗ್ರಹ

ಹೆನ್ರಿ ಕಗನ್, ಕೆನ್ಸೊ ಸೊವೈಗೆ 2026ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ

'ನಾನು ಕ್ಯಾಬ್‌ನಲ್ಲಿ ಓಡಾಡೋ ಹುಡುಗಿ ಕಣ್ರೋ.. ಹೋಗ್ಲಿ ಪಾಪ ಅಂತಾ ಬಸ್`ನಲ್ಲಿ ಬಂದೆ': MTC ಬಸ್‌ನಲ್ಲಿ ಕುಡಿದ ಮತ್ತಿನಲ್ಲಿ ಯುವತಿ ರಂಪಾಟ, Video ವೈರಲ್