ದೇಶ

ಮಸೂದ್'ಗೆ ಬೆಂಬಲ: ಪಶ್ಚಾತ್ತಾಪ ಪಡಬೇಕಾದ ದಿನ ಮುಂದೆ ಬರಲಿದೆ-ಚೀನಾಗೆ ಬಿಜೆಪಿ

Manjula VN

ನವದೆಹಲಿ: ಉಗ್ರ ಮಸೂದ್ ಅಜರ್'ಗೆ ಬೆಂಬಲ ವ್ಯಕ್ತಪಡಿಸುತ್ತಿರುವ ಚೀನಾಗೆ ಮುಂದೊಂದು ದಿನ ಪಶ್ಚಾತ್ತಾಪ ಪಡಬೇಕಾದ ದಿನ ಬರಲಿದೆ ಎಂದು ಬಿಜೆಪಿ ಭಾನುವಾರ ಹೇಳಿದೆ.

ಈ ಕುರಿತಂತೆ ಮಾತನಾಡಿರುವ ಬಿಜೆಪಿ ನಾಯಕ ಶಹ್ನಾವಾಜ್ ಹುಸೇನ್ ಅವರು, ಮಸೂಜ್ ಅಜರ್'ಗೆ ನಿಷೇಧ ಹೇರಲು ಭಾರತ ಸರ್ಕಾರ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ. ಆದರೆ, ಚೀನಾ ಮಾತ್ರ ಇದಕ್ಕೆ ತಡೆಯೊಡ್ಡುತ್ತಿದೆ. ಮಸೂದ್ ಬೆಂಬಲ ನೀಡುತ್ತಿರುವ ಚೀನಾಗೆ ಮುಂದೊಂದು ದಿನ ಪಶ್ಚಾತ್ತಾಪ ಪಡಬೇಕಾದ ದಿನ ಬರಲಿದೆ ಎಂದು ಹೇಳಿದ್ದಾರೆ.

ಚೀನಾದೊಂದಿಗೆ ಭಾರತ ಉತ್ತಮ ಸಂಬಂಧವನ್ನು ಉಳಿಸಿಕೊಂಡು ಬಂದಿದೆ. ಉತ್ತಮ ವ್ಯವಹಾರ ಚಟುವಟಿಕೆಗಳನ್ನು ನಡೆಸುತ್ತಿದೆ. ಆದರೂ, ಎರಡೂ ರಾಷ್ಟ್ರಗಳ ನಡುವೆ ಸಾಕಷ್ಟು ಸಮಸ್ಯೆಗಳಿವೆ. ಉಭಯ ದೇಶಗಳ ನಡುವೆ ಅಪಶ್ರುತಿಗಳು ಕೇಳಿಬರುತ್ತಿವೆ ಎಂದು ತಿಳಿಸಿದ್ದಾರೆ.

ನಿನ್ನಯಷ್ಟೇ ಮಸೂದ್ ಅಜರ್ ಗೆ ನೀಡುತ್ತಿರುವ ಬೆಂಬಲವನ್ನು ಸಮರ್ಥಿಸಿಕೊಂಡಿದ್ದ ಚೀನಾ, ಮಸೂದ್ ವಿಚಾರ ಕುರಿತಂತೆ ಭಾರತದ ಸಲ್ಲಿಸಿರುವ ಮನವಿಯಲ್ಲಿ ಗೊಂದಲಗಳಿರುವುದರಿಂದ ತಾಂತ್ರಿಕವಾಗಿ ತಡೆ ನೀಡುವ ಮೂಲಕ ಗೊಂದಲ ಬಗೆಹರಿಸಲು ಕಾಲಾವಕಾಶವನ್ನು ಮಾಡಿಕೊಡಲಾಗಿದೆ ಎಂದು ಹೇಳಿತ್ತು. ವಿಶ್ವಸಂಸ್ಥೆಯಲ್ಲಿ ಚೀನಾ ಹೊರತುಪಡಿಸಿದರೆ ಭದ್ರತಾ ಸಮಿತಿಯ 14 ದೇಶಗಳು ಈಗಾಗಲೇ ಭಾರತದ ಮನವಿಗೆ ಸಮ್ಮತಿ ಸೂಚಿಸಿವೆ.

SCROLL FOR NEXT