ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ದೇಶಕ್ಕೆ ಹೊರಗಿನ ಶತ್ರುಗಳಿಗಿಂತ ಒಳಗಿನ ಶತ್ರುಗಳಿಂದಲೇ ಅಪಾಯ ಹೆಚ್ಚು: ಶಿವಶಂಕರ್ ಮೆನನ್

ಭಾರತಕ್ಕೆ ಹೊರಗಿನ ಶತ್ರುಗಳಿಗಿಂತಲೂ ಒಳಗಿನ ಶತ್ರುಗಳಿಂದಲೇ ಹೆಚ್ಚು ಅಪಾಯವಿದೆ ಎಂದು ರಾಷ್ಟ್ರೀಯ ಭದ್ರತಾ ಮಾಜಿ ಸಲಹೆಗಾರ ಶಿವಶಂಕರ್ ಮೆನನ್ ಅವರು ಗುರುವಾರ...

ರಾಷ್ಟ್ರೀಯ ಭದ್ರತಾ ಮಾಜಿ ಸಲಹೆಗಾರ ಶಿವಶಂಕರ್ ಮೆನನ್
Manjula VN
Updated On : 13 Oct 2016, 3:34 am

ವಾಷಿಂಗ್ಟನ್: ಭಾರತಕ್ಕೆ ಹೊರಗಿನ ಶತ್ರುಗಳಿಗಿಂತಲೂ ಒಳಗಿನ ಶತ್ರುಗಳಿಂದಲೇ ಹೆಚ್ಚು ಅಪಾಯವಿದೆ ಎಂದು ರಾಷ್ಟ್ರೀಯ ಭದ್ರತಾ ಮಾಜಿ ಸಲಹೆಗಾರ ಶಿವಶಂಕರ್ ಮೆನನ್ ಅವರು ಗುರುವಾರ ಹೇಳಿದ್ದಾರೆ.

ಕೋಮು ಹಾಗೂ ಸಾಮಾಜಿಕ ಹಿಂಸಾಚಾರದಂತಹ ಬೆದರಿಕೆಗಳನ್ನು ಭಾರತ ಎದುರಿಸುತ್ತಿದ್ದು, ಬಾಹ್ಯಕ್ಕಿಂತಲೂ ಆಂತರಿಕವಾಗಿಯೇ ಭಾರತ ಹೆಚ್ಚು ಅಪಾಯಗಳನ್ನು ಎದುರಿಸುತ್ತಿದೆ ಎಂದು ಅವರು ಹೇಳಿದ್ದಾರೆ.

2012ರಿಂದಲೂ ಭಾರತ ಕೋಮು ಘರ್ಷಣೆ, ಸಾಮಾಜಿಕ ಘರ್ಷಣೆ ಹಾಗೂ ಇನ್ನಿತರೆ ಆಂತರಿಕ ಘರ್ಷಣೆಗಳನ್ನು ಹೆಚ್ಚಾಗಿ ಎದುರಿಸುತ್ತಿದೆ. ಇಂತಹ ವಿಚಾರಗಳಲ್ಲಿ ಯಾವ ಮಟ್ಟದಲ್ಲಿ ಹಾಗೂ ಹೇಗೆ ಸಮಸ್ಯೆಯನ್ನು ಎದುರಿಸಬೇಕೆಂಬುದನ್ನು ಅರಿಯಬೇಕಿದೆ.

ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗೆ ಕಾರಣವಲ್ಲ. ಮಹಿಳೆಯರ ಮೇಲಿನ ದೌರ್ಜನ್ಯ, ಕೋಮು, ಜಾತಿ ಹಿಂಸಾಚಾರ ಇನ್ನಿತರೆ ಸಮಸ್ಯೆಗಳು ಸಮಾಜ ಹಾಗೂ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ. ಇಂತಹ ಸಮಸ್ಯೆಗಳನ್ನು ಹೇಗೆ ಬಗೆಹರಿಸಿಕೊಳ್ಳಬೇಕೆಂಬುದನ್ನು ತಿಳಿಯಬೇಕಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement