ಸಂಗ್ರಹ ಚಿತ್ರ 
ದೇಶ

ಶೌಚಾಲಯ ಕಟ್ಟಿಸಲು ಮಾಂಗಲ್ಯವನ್ನೇ ಮಾರಿದ ಮಹಿಳೆ!

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಅಭಿಯಾನದಿಂದ ಪ್ರೇರಣೆಗೊಂಡಿದ್ದ ಮಹಿಳೆಯೊಬ್ಬರು ತಮ್ಮ ಮಾಂಗಲ್ಯವನ್ನೇ ಮಾರಿ ಶೌಚಾಲಯವನ್ನು ಕಟ್ಟಿಸಿರುವ ಘಟನೆಯೊಂದು...

ಕಾನ್ಪುರ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಅಭಿಯಾನದಿಂದ ಪ್ರೇರಣೆಗೊಂಡಿದ್ದ ಮಹಿಳೆಯೊಬ್ಬರು ತಮ್ಮ ಮಾಂಗಲ್ಯವನ್ನೇ ಮಾರಿ ಶೌಚಾಲಯವನ್ನು ಕಟ್ಟಿಸಿರುವ ಘಟನೆಯೊಂದು ಕಾನ್ಪುರ ಜಿಲ್ಲೆಯ ವಿಧ್ನು ಗ್ರಾಮದಲ್ಲಿ ನಡೆದಿದೆ.
 
ಲತಾ ದಿವಾಕರ್ ಮಾಂಗಲ್ಯ ಮಾರಿ ಶೌಚಾಲಯ ಕಟ್ಟಿಸಿದ ಮಹಿಳೆಯಾಗಿದ್ದಾರೆ. ಸ್ವಚ್ಛ ಭಾರತ ಅಭಿಯಾನದಿಂದ ಪ್ರೇರಣೆಗೊಂಡಿದ್ದ ಲತಾ ಅವರು, ಶೌಚಾಲಯ ಕಟ್ಟಿಸುವಂತೆ ಪತಿಗೆ ಹೇಳಿದ್ದಾರೆ. ಇದರಂತೆ ಇಬ್ಬರ ನಡುವೆ ಸಾಕಷ್ಟು ಜಗಳವಾಗಿದೆ. ನಂತರ ತನ್ನ ಮಾತಿಗೆ ಸ್ವಲ್ಪ ಕೂಡ ಬೆಲೆ ಕೊಡದ ಪತಿಯ ವಿರುದ್ಧ ತೀವ್ರವಾಗಿ ಕೆಂಡಾಮಂಡಲವಾದ ಲತಾ ಅವರು ಕೊನೆಗೆ ಯಾವುದೇ ದಾರಿ ಇಲ್ಲದೆ ಕೊರಳಲ್ಲಿದ್ದ ಮಾಂಗಲ್ಯವನ್ನು ರು.17 ಸಾವಿರಕ್ಕೆ ಮಾರಿ ಶೌಚಾಲಯವನ್ನು ಕಟ್ಟಿಸಿದ್ದಾರೆ.

ಶೌಚಾಲಯಕ್ಕಿಂತ ಮಗಳ ಮದುವೆಗೆ ಹಣವನ್ನು ಖರ್ಚು ಮಾಡಬೇಕೆಂದು ನನ್ನ ಪತಿ ಹೇಳುತ್ತಿದ್ದರು. ಆದರೆ, ಶೌಚಾಲಯ ಕಟ್ಟಿಸುವುದು ನನಗೆ ಮುಖ್ಯವಾಗಿತ್ತು. ಶೌಚಾಲಯ ಕಟ್ಟಿಸಲು ರು.25,000 ಹಣ ಬೇಕಿತ್ತು. ಮಾಂಗಲ್ಯವನ್ನು ರು.17 ಸಾವಿರಕ್ಕೆ ಮಾರಿದ್ದೆ. ಉಳಿದ ಹಣಕ್ಕೆ ಬೇರಾವುದೇ ದಾರಿಯಿಲ್ಲದೆ ಮನೆಯಲ್ಲಿದ್ದ ಕರುಗಳನ್ನು ಮಾರಿದೆ ಎಂದು ಲತಾ ಅವರು ಹೇಳಿದ್ದಾರೆ.

ಪತ್ನಿಯ ಈ ನಡೆಗೆ ಇದೀಗ ಪತಿ ಬಾಬುಲಾಲ್ ಅವರು ಕೂಡ ಶೌಚಾಲಯದ ಮಹತ್ವವನ್ನು ಅರಿತುಕೊಂಡಿದ್ದು, ಪತ್ನಿಗೆ ಬೆಂಬಲ ನೀಡಲು ಮುಂದಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಬ್ರೇಕ್ ಫಾಸ್ಟ್ ಮೀಟಿಂಗ್: ಮುಂದಿನ CM ಡಿಕೆ.ಶಿವಕುಮಾರ್; ಸಚಿವರಿಗೆ ಸಿದ್ದರಾಮಯ್ಯ ಮಾಹಿತಿ, ಮಧ್ಯಾಹ್ನ 2.30ಕ್ಕೆ ರಾಜೀನಾಮೆ

ಮೋದಿಯವರ ಇತ್ತೀಚಿನ ಫಾರಿನ್ ಟ್ರಿಪ್ಪಿನಿಂದ ಭಾರತಕ್ಕೇನು ಲಾಭ? (ಹಣಕ್ಲಾಸು)

ಕಾಂಗ್ರೆಸ್‌ ಪವರ್ ಪಾಲಿಟಿಕ್ಸ್‌ಗೆ ಮತ್ತೊಂದು ಟ್ವಿಸ್ಟ್: ರಾಜ್ಯಪಾಲರ ಭೇಟಿಗೆ ಸಿದ್ದರಾಮಯ್ಯ ಸಮಯ ಕೇಳಿಲ್ಲ; ರಾಜೀನಾಮೆ ಊಹಾಪೋಹಕ್ಕೆ ಲೋಕಭವನ ಸ್ಪಷ್ಟನೆ..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

SCROLL FOR NEXT