ಸೀಸರ್ ಶ್ವಾನ (ಸಂಗ್ರಹ ಚಿತ್ರ) 
ದೇಶ

ಮುಂಬೈ ಉಗ್ರ ದಾಳಿ "ಹೀರೋ ಸೀಸರ್" ವಿಧಿವಶ

26/11 ಮುಂಬೈ ದಾಳಿ ವೇಳೆ ಉಗ್ರದಾಳಿಯನ್ನು ಪತ್ತೆ ಮಾಡಿ ನೂರಾರು ನಾಗರಿಕರ ಸಾವನ್ನು ತಪ್ಪಿಸಿದ್ದ ಮುಂಬೈ ಪೊಲೀಸ್ ಶ್ವಾನ ಸೀಸರ್ ಗುರುವಾರ ರಾತ್ರಿ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.

ನವದೆಹಲಿ: 26/11 ಮುಂಬೈ ದಾಳಿ ವೇಳೆ ಉಗ್ರದಾಳಿಯನ್ನು ಪತ್ತೆ ಮಾಡಿ ನೂರಾರು ನಾಗರಿಕರ ಸಾವನ್ನು ತಪ್ಪಿಸಿದ್ದ ಮುಂಬೈ ಪೊಲೀಸ್ ಶ್ವಾನ ಸೀಸರ್ ಗುರುವಾರ ರಾತ್ರಿ ಸಾವನ್ನಪ್ಪಿದೆ  ಎಂದು ತಿಳಿದುಬಂದಿದೆ.

ಹನ್ನೊಂದು ವರ್ಷ ವಯಸ್ಸಿನ ಸೀಸರ್ ಇತ್ತೀಚೆಗೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿತ್ತು. ಕಳೆದ ಕೆಲ ದಿನಗಳಿಂದ ಹಿಂದೆ ನಾಯಿ ಆರೋಗ್ಯ ತೀರಾ ಹದಗೆಟ್ಟು ನಡೆಯಲೂ  ಆಗದ ಸ್ಥಿತಿಯಲ್ಲಿತ್ತು ಎಂದು ಸಿಬ್ಬಂದಿಗಳು ತಿಳಿಸಿದ್ದಾರೆ. ಸೀಸರ್ ಆರೋಗ್ಯದಲ್ಲಿ ಕಳೆದೊಂದು ವಾರದಲ್ಲಿ ತಕ್ಕ ಮಟ್ಟಿನ ಚೇತರಿಕೆ ಕಂಡಿತ್ತು. ಇದರಿಂದ ಸೀಸರ್ ಮೊದಲಿನಂತೆ ಓಡಾಡಬಹುದು  ಎಂಬ ಆಶಾಭಾವ ಹೊಂದಿದ್ದೇವು. ಆದರೆ ಅದು ಹುಸಿಯಾಗಿದ್ದು, ನಿನ್ನೆ ತಡರಾತ್ರಿಯಲ್ಲಿ ಸೀಸರ್ ಸಾವನ್ನಪ್ಪಿದೆ.

ಮುಂಬೈ ಉಗ್ರ ದಾಳಿ ವೇಳೆ ತಾಜ್ ಹೊಟೆಲ್ ನಲ್ಲಿ ಅಡಗಿದ್ದ ಉಗ್ರರ ಜಾಡು ಹಿಡಿಯುವಲ್ಲಿ ಸೀಸರ್ ಪ್ರಮುಖ ಪಾತ್ರ ವಹಿಸಿತ್ತು. ಸೀಸರ್ ನೊಂದಿಗೆ ಇಲಾಖೆಯ ಇತರೆ ಶ್ವಾನಗಳಾದ ಮ್ಯಾಕ್ಸ್,  ಸುಲ್ತಾನ್ ಮತ್ತು ಟೈಗರ್ ಎಂಬ ನಾಯಿಗಳು ಸಹಾಯ ಮಾಡಿದ್ದವು. ಈ ನಾಲ್ಕು ಪೊಲೀಸ್ ನಾಯಿಗಳಲ್ಲಿ ಮ್ಯಾಕ್ಸ್ ಮತ್ತು ಸುಲ್ತಾನ್ ನಾಯಿಗಳು ಈ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿ  ಸಾವನ್ನಪ್ಪಿದ್ದವು. ಇತ್ತೀಚೆಗಷ್ಟೇ ಟೈಗರ್ ಎಂಬ ನಾಯಿ ಕೂಡ ಸಾವನ್ನಪ್ಪುವುದರೊಂದಿಗೆ ಸೀಸರ್ ಒಂಟಿಯಾಗಿತ್ತು. ಫಿಜಾ ಶಾ ಎಂಬ ವ್ಯಕ್ತಿ ಈ ನಾಯಿಯನ್ನು ಪೋಷಿಸುತ್ತಿದ್ದರು.

ಇದೀಗ ಸೀಸರ್ ಕೂಡ ತನ್ನ ಸ್ನೇಹಿತರಂತೆ ಇಹಲೋಕ ತ್ಯಜಿಸಿದೆ. ಸೀಸರ್ ಸಾವಿಗೆ ಮುಂಬೈ ಪೊಲೀಸ್ ಇಲಾಖೆ ಕಂಬನಿ ಮಿಡಿದಿದ್ದು, ಇಲಾಖೆಯ ವತಿಯಿಂದ ಶೋಕಾಚರಣೆಗೆ ಆದೇಶ  ನೀಡಲಾಗಿದೆ. ಅಂತೆಯೇ ಸಕಲ ಸರ್ಕಾರಿ ಗೌರವಗಳೊಂದಿಗೆ ಸೀಸರ್ ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT