ಪಾಟ್ನಾ: ಇಸ್ಲಾಮಿಕ್ ದೇಶಗಳು ವಿಚ್ಛೇದನ ವ್ಯವಸ್ಥೆಯನ್ನು ತಮಗೆ ಬೇಕಾದ ರೀತಿಯಲ್ಲಿ ಬದಲಿಸಿಕೊಳ್ಳಬಹುದಾದರೇ ಅದು ಭಾರತದಲ್ಲಿ ಏಕೆ ಸಾಧ್ಯವಿಲ್ಲ ಎಂದು ಕೇಂದ್ರ ಕಾನೂನು ಸಚಿವ ರವಿ ಶಂಕರ್ ಪ್ರಸಾದ್ ಪ್ರಶ್ನಿಸಿದ್ದಾರೆ.
ಪಾಕಿಸ್ಥಾನ ಸಹಿತ ಡಜನ್‌ಗೂ ಹೆಚ್ಚು ಮುಸ್ಲಿಂ ದೇಶ ಗಳಲ್ಲಿ ತ್ರಿವಳಿ ತಲಾಖ್ ಇಲ್ಲ. ಅಲ್ಲಿ ಆಚಾರವನ್ನು ಕಾನೂನನ್ನು ರೂಪಿಸಿ ನಿಯಂತ್ರಿಸಲಾಗಿದೆ. ಹಾಗಿದ್ದಲ್ಲಿ "ಜಾತ್ಯತೀತ' ದೇಶವಾದ ಭಾರತದಲ್ಲಿ ಅದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ತ್ರಿವಳಿ ತಲಾಖ್ ವಿರೋಧಿಸಿ ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಸರಕಾರ ಅಫಿದವಿತಟ್ ಸಲ್ಲಿಸಿದ್ದನ್ನು ವಿರೋಧಿಸಿ ಅಖೀಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹೇಳಿಕೆ ಮತ್ತು ಏಕರೂಪದ ನಾಗರಿಕ ಸಂಹಿತೆ ಬಹಿಷ್ಕರಿಸುವಂತೆ ಕರೆ ನೀಡಿದ ಬೆನ್ನಲ್ಲೇ ರವಿಶಂಕರ್ ಪ್ರಸಾದ್ ಈ ಪ್ರಶ್ನೆ ಕೇಳಿದ್ದಾರೆ.
ಪಾಕಿಸ್ಥಾನ, ಟ್ಯುನೀಶಿಯಾ, ಮೊರಕ್ಕೋ, ಇರಾನ್, ಈಜಿಪ್ಟ್ ಗಳಲ್ಲಿ ತ್ರಿವಳಿ ತಲಾಖ್ ಮೇಲೆ ನಿಯಂತ್ರಣವಿದೆ. ಈ ಕಾನೂನನ್ನು ಷರಿಯಾ ವಿರುದ್ಧ ಎಂದು ಅಲ್ಲಿ ಯಾರೂ ಹೇಳಿಲ್ಲ. ಹಾಗಿದ್ದರೆ, ಭಾರತದಲ್ಲಿ ಮಾತ್ರ ಈ ಕಾನೂನು ರೂಪಿಸಿದರೆ ಷರಿಯಾ ವಿರುದ್ಧ ಎಂದಾಗುತ್ತದೆಯೇ? ಎಂದು ಪ್ರಶ್ನಿಸಿದರು.