ದೇಶ

ವಿಷಪ್ರಾಷನ, ವಿದ್ಯುದಾಘಾತದಿಂದ 13 ಹುಲಿಗಳ ಸಾವು

Shilpa D

ಭೂಪಾಲ್: ವಿಷಪ್ರಾಶನ ಮತ್ತು ವಿದ್ಯುತ್ ಆಘಾತಗಳಿಂದಾಗಿ ಮಧ್ಯ ಪ್ರದೇಶದ ಭೂಪಾಲ್  ನ ಎರಡು ರಾಷ್ಟ್ರೀಯ ಉದ್ಯಾನಗಳಲ್ಲಿ ಕಳೆದ 1 ವರ್ಷದಲ್ಲಿ ಸುಮಾರು 13 ಹುಲಿಗಳು ಸಾವನ್ನಪ್ಪಿವೆ ಎಂದು ತಿಳಿದು ಬಂದಿದೆ.

ಮಾಹಿತಿ ಹಕ್ಕು ಕಾಯ್ದೆ ಅನ್ವಯ ಪೆಂಚ್ ರಾಷ್ಟ್ರೀಯ ವನ್ಯಧಾಮನಗಳಲ್ಲಿ 9 ಹುಲಿಗಳು ಹಾಗೂ ಬಂದಾವರ್ಗ್ ರಾಷ್ಟ್ರೀಯ ಉದ್ಯಾನವನದಲ್ಲಿ 4 ಹುಲಿಗಳು ಸಾವನ್ನಪ್ಪಿವೆ ಎಂದು ಮಧ್ಯಪ್ರದೇಶ ಅರಣ್ಯ ಇಲಾಖೆ ಮಾಹಿತಿ ನೀಡಿದೆ.

ಮಧ್ಯ ಪ್ರದೇಶದ ವನ್ಯಧಾಮಗಳಲ್ಲಿ ಹುಲಿಗಳ ಸಾವಿನ ಬಗ್ಗೆ ತನಿಖೆ ನಡೆಸಬೇಕೆಂದು ವನ್ಯಜೀವಿ ಕಾರ್ಯಕರ್ತ ಅಜಯ್ ದುಬೆ ಹೈಕೋರ್ಟ್ ನಲ್ಲಿ  ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಕಳೆದ ಒಂದು ವರ್ಷದಲ್ಲಿ ವನ್ಯಧಾಮಗಳಲ್ಲಿ ಸಾವನ್ನಪ್ಪಿರುವ ಹುಲಿಗಳ ಮಾಹಿತಿ ಹಾಗೂ ಹೇಗೆ ಸತ್ತವು ಎಂಬುದರ ಬಗ್ಗೆ ಮಾಹಿತಿ ನೀಡಬೇಕೆಂದು ಕೋರಿದ್ದರು.

ಅದರಂತೆ ಮಾಹಿತಿ ನೀಡಿರುವ ಮಧ್ಯಪ್ರದೇಶ ಅರಣ್ಯ ಇಲಾಖೆ, ವಿಷ, ವಿದ್ಯುತ್ ಸಾಕ್, ಹಾಗೂಬ ರೋಗಗಳಿಂದ ಸಾವನ್ನಪ್ಪಿವೆ ಎಂದು ತಿಳಿಸಿದೆ.

SCROLL FOR NEXT