ದೇಶ

ಹೈಪ್ರೊಫೈಲ್ ವೇಶ್ಯವಾಟಿಕೆ ಜಾಲ ಬಯಲು, ವಾಟ್ಸಪ್‌ನಲ್ಲೇ ರೇಟ್‌ ಫಿಕ್ಸ್

Lingaraj Badiger
ಗುರಗಾಂವ್‌: ಖಚಿತ ಮಾಹಿತಿಯನ್ನು ಆಧರಿಸಿ ಗುರಗಾಂವ್  ಸೆಕ್ಟರ್‌ 51ರಲ್ಲಿ ಹರಿಯಾಣ ಪೊಲೀಸರು ಹೈ ಪ್ರೊಫೈಲ್‌ ಸೆಕ್ಸ್‌ ಜಾಲವನ್ನು ಪತ್ತೆ ಹಚ್ಚಿದ್ದು, ಐವರು ಯುವತಿಯರು ಸೇರಿದಂತೆ 10 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. 
ವಶಕ್ಕೆ ಪಡೆದಿರುವ ಐವರು ಯುವತಿಯರ ಪೈಕಿ ಮೂವರು ವಿದೇಶಿ ಯುವತಿಯರಾಗಿದ್ದು ಇಬ್ಬರು ದೆಹಲಿ ಮೂಲದವರಾಗಿದ್ದಾರೆ.
ಸೆಕ್ಸ್‌ ಜಾಲಕ್ಕೆ ಗಿರಾಕಿಗಳನ್ನು ವಾಟ್ಸಪ್‌ ಮೂಲಕ ಫೋಟೋ ಕಳುಹಿಸಿ ರೇಟ್‌ ಫಿಕ್ಸ್‌ ಮಾಡಿಕೊಳ್ಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 
ಈ ಹೈಪ್ರೊಫೈಲ್ ವೇಶ್ಯವಾಟಿಕೆ ಜಾಲದಲ್ಲಿ ಸಕ್ರಿಯವಾಗಿದ್ದ ಐವರು ಪುರುಷರನ್ನೂ ಪೊಲೀಸರು ವಶಕ್ಕೆ ಪಡೆದಿದ್ದು, ವಿದೇಶಿ ಯುವತಿಯರ ಬಳಿ ಪಾಸ್‌ಪೋರ್ಟ್‌ ಸಹ ಇಲ್ಲ ಎಂದು ಅವರು ಹೇಳಿದ್ದಾರೆ.
SCROLL FOR NEXT