ಪುಣೆ: ಕಾಟನ್ ಬಟ್ಟೆ ಕಂಪನಿ ಗೋದಾಮಿಗೆ ಬೆಂಕಿಬಿದ್ದ ಪರಿಣಾಮ ನಾಲ್ವರು ಮಹಿಳೆಯರು ಸೇರಿದಂತೆ ಒಟ್ಟು ಐದು ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಪುಣೆಯಲ್ಲಿ ನಡೆದಿದೆ.
ಪುಣೆಯಿಂದ 45 ಕಿಮೀ ದೂರದ ಹೊರವಲಯಲ್ಲಿರುವ ಕರಬ್ವಾಡಿಯಲ್ಲಿ ಇಂದು ಬೆಳಗ್ಗೆ ಸುಮಾರು 10 ಗಂಟೆ ಸಮಯದಲ್ಲಿ ಘಟನೆ ಸಂಭವಿಸಿದೆ, ಗೋಡೋನ್ ನಲ್ಲಿದ್ದ ಕಾರ್ಮಿಕರು ಹೊರ ಬರಲಾಗದಂತೆ ಕೆಲವೇ ಕ್ಷಣದಲ್ಲಿ ಬೆಂಕಿ ಎಲ್ಲೆಡೆ ಆವರಿಸಿಕೊಂಡಿದೆ. ಗೋದಾಮಿನಲ್ಲಿದ್ದ ಐವರು ಕೆಲಸಗಾರರು ಹೇಗೋ ಬೆಂಕಿಯಿಂದ ತಪ್ಪಿಸಿಕೊಂಡು ಹೊರ ಬಂದಿದ್ದಾರೆ.
ಸ್ಥಳಕ್ಕಾಗಮಿಸಿದ ಐದು ಅಗ್ನಿಶಾಮಕ ವಾಹನ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿವೆ, ಮೃತ ಪಟ್ಟ ಐವರು ಕಂಪನಿಯ ಕೆಲಸಗಾರರಾಗಿದ್ದಾರೆ.