ಯುಕೆಪಿಎನ್ ಪಿ ನಾಯಕ ಸರ್ದಾರ್ ಶೌಕಾತ್ ಅಲಿ ಕಾಶ್ಮೀರಿ 
ದೇಶ

ಪ್ರಾಣತ್ಯಾಗ ಮಾಡುತ್ತೇವೆ, ಮಾತೃಭೂಮಿಯನ್ನಲ್ಲ: ಪಿಒಕೆ ಹೋರಾಟಗಾರರ ಹೇಳಿಕೆ

ಕಾಶ್ಮೀರಿಗರು ತಮ್ಮ ಪ್ರಾಣ ತ್ಯಾಗ ಮಾಡಲು ಸಿದ್ಧರಿದ್ದಾರೆ. ಆದರೆ, ಮಾತೃಭೂಮಿಯನ್ನು ಮಾತ್ರ ಯಾವುದೇ ಕಾರಣಕ್ಕೂ ತ್ಯಾಗ ಮಾಡುವುದಿಲ್ಲ ಎಂದು ಯುಕೆಪಿಎನ್ ಪಿ ನಾಯಕ ಸರ್ದಾರ್ ಶೌಕಾತ್ ಅಲಿ ಕಾಶ್ಮೀರಿ...

ಬ್ರಸೆಲ್ಸ್: ಕಾಶ್ಮೀರಿಗರು ತಮ್ಮ ಪ್ರಾಣ ತ್ಯಾಗ ಮಾಡಲು ಸಿದ್ಧರಿದ್ದಾರೆ. ಆದರೆ, ಮಾತೃಭೂಮಿಯನ್ನು ಮಾತ್ರ ಯಾವುದೇ ಕಾರಣಕ್ಕೂ ತ್ಯಾಗ ಮಾಡುವುದಿಲ್ಲ ಎಂದು ಯುಕೆಪಿಎನ್ ಪಿ ನಾಯಕ ಸರ್ದಾರ್ ಶೌಕಾತ್ ಅಲಿ ಕಾಶ್ಮೀರಿ ಹೇಳಿದ್ದಾರೆ.  

ಅಂದಿನ ಅವಿಭಜಿತ ಕಾಶ್ಮೀರ ಅರಸೊತ್ತಿಗೆ ಮೇಲೆ ಪಠಾಣರ ಹೆಸರಲ್ಲಿ ಪಾಕಿಸ್ತಾನ ಸೇನೆ ಮಾಡಿದ ದಾಳಿಯನ್ನು ಪಾಕ್ ಆಕ್ರಮಿತ ಕಾಶ್ಮೀರಿ ಪ್ರಜೆಗಳು ಖಂಡಿಸಿ ನಿನ್ನೆಯಷ್ಟೇ ಕರಾಳ ದಿನವನ್ನು ಆಚರಣೆ ಮಾಡಿತು.

ಕರಾಳ ದಿನಾಚರಣೆ ಕುರಿತಂತೆ ಪಾಕಿಸ್ತಾನ ಸೇನೆ ಕಠಿಣ ಸಂದೇಶವೊಂದನ್ನು ಅಲ್ಲಿನ ಹೋರಾಟಗಾರರು ರವಾನಿಸಿದ್ದಾರೆ. ಕಾಶ್ಮೀರಿಗರಿಗೆ, ತಮ್ಮ ಜನರನ್ನು ಮೇಲೆ ಕಾಳಜಿ ವಹಿಸುತ್ತಿರುವವರಿಗೆ, ತಮ್ಮ ಜನರು ಸುರಕ್ಷಿತವಾಗಿರಬೇಕೆಂದು ಬಯಸುತ್ತಿರುವವರಿಗೆ ಇಂದು ಅತ್ಯಂತ ಮುಖ್ಯವಾದ ದಿನವಾಗಿದೆ. ಕಾಶ್ಮೀರದಲ್ಲಿ ಹಿಂಸಾಚಾರ ಸೃಷ್ಟಿಸುತ್ತಿರುವ ಜನರಿಗೆ ಎಚ್ಚರಿಕೆ ಸಂದೇಶ ರವಾನಿಸುವ ದಿನವಾಗಿದೆ. ಕಾಶ್ಮೀರದ ಜನತೆಗ ಪ್ರಾಣ ತ್ಯಾಗ ಮಾಡಲು ಸಿದ್ಧರಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ತಾಯಿನಾಡನ್ನು ಮಾತ್ರ ತ್ಯಾಗ ಮಾಡುವುದಿಲ್ಲ ಎಂದು ಯುಕೆಪಿಎನ್ ಪಿ ನಾಯಕ ಹೇಳಿದ್ದಾರೆ.

1947 ಅ.22ರಂದು ಭಾರತ ಮತ್ತು ಪಾಕಿಸ್ತಾನ ರಾಷ್ಟ್ರಗಳು ವಿಭಜನೆಯಾಗಿತ್ತಾದರೂ ಕಾಶ್ಮೀರ ಮಾತ್ರ ಇನ್ನೂ ವಿಭಜನೆಯಾಗಿರಲಿಲ್ಲ. ಈ ಹೊತ್ತಿನಲ್ಲೇ ಪಾಕಿಸ್ತಾನದ ಕೆಲ ಮೂಲಭೂತವಾದಿಗಳೊಂದಿಗೆ ಸೇರಿದ ಪಾಕ್ ಸೈನಿಕರು ಕಾಶ್ಮೀರದ ಮೇಲೆ ದಾಳಿ ಮಾಡಿ ಅಪಾರ ಪ್ರಮಾಣದ ಹಿಂಸಾಚಾರ ನಡೆಸಿದರು.

ನಮ್ಮ ತಾಯಿನಾಡನ್ನು ವಶಕ್ಕೆ ಪಡೆಯಲು ಪಾಕಿಸ್ತಾನ ಸೇನೆ ಸಾಕಷ್ಟು ಪ್ರಯತ್ನಗಳನ್ನು ಮಾಡಿತ್ತು. ಈ ವೇಳೆ ನಡೆದ ಹೋರಾಟದಲ್ಲಿ ನೂರಾರು, ಸಾವಿರಾರು ಕಾಶ್ಮೀರಿಗರು ಬಲಿಯಾದರು. ವಯಸ್ಸಾದವರು ಹಾಗೂ ಮಕ್ಕಳು ಸಾವನ್ನಪ್ಪಿದರು. ಇಂದು ಆ ಕರಾಳ ದಿನವನ್ನು ನೆನೆಯಬೇಕಿದೆ.

ಕಾಶ್ಮೀರದಲ್ಲಿರುವ ಜನತೆ ಅಭಿವೃದ್ಧಿ ಹಾಗೂ ಉತ್ತಮವಾಗಿ ಆಲೋಚನೆ ಮಾಡುತ್ತಿದ್ದೇವೆಂದು ಪಾಕಿಸ್ತಾನ ಸರ್ಕಾರ ಹೇಳುತ್ತದೆ. ಆದರೆ, ನಮ್ಮ ವಿರುದ್ಧವೇ ಪಿತೂರಿ ನಡೆಸುತ್ತಾ ಬಂದಿದೆ. ಒಂದೆಡೆ ನಮ್ಮೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳುತ್ತದೆ. ಮತ್ತೊಂದೆಡೆ ಪೇಶಾವರದಂತಹ ದಾಳಿಗಳನ್ನು ಮಾಡುತ್ತದೆ. ಕಾಶ್ಮೀರಿ ಮಹಿಳೆಯರನ್ನು ಅಪಹರಣ ಮಾಡುತ್ತದೆ. ಮಕ್ಕಳನ್ನು ಹತ್ಯೆ ಮಾಡುತ್ತದೆ. ಕಾಶ್ಮೀರಿಗರಿಗೆ ಹಿಂಸೆಯನ್ನು ನೀಡುತ್ತದೆ ಎಂದು ಸರ್ದಾರ್ ಶೌಕಾತ್ ಅಲಿ ಕಾಶ್ಮೀರಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿಮಾನ ಹೈಜಾಕ್ ಬೆದರಿಕೆ ಎಚ್ಚರಿಕೆ: ಫ್ರಾಂಕ್‌ಫರ್ಟ್‌- ದೆಹಲಿ Air India ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್

ಬಿಹಾರದ ವೈಶಾಲಿಯಲ್ಲಿ ದೋಣಿ ಮುಳುಗಿ ಕನಿಷ್ಠ 13 ಮಂದಿ ಸಾವು; ಪ್ರಧಾನಿ ಮೋದಿ ಸಂತಾಪ, ಪರಿಹಾರ ಘೋಷಣೆ; Video

'ಜಂತರ್ ಮಂತರ್‌'ಗೆ ಅಕ್ರಮ ಪ್ರವೇಶ ಆರೋಪ: ಮುನ್ನೆಚ್ಚರಿಕೆ ಕ್ರಮವಾಗಿ CJPಯ ರಂಕಾ, ದಾಸ್, ಶಿಂಧೆ ಬಂಧನ

‘ರಾಹುಲ್ ಗಾಂಧಿ ನನ್ನನ್ನು ಪಕ್ಕಕ್ಕೆ ತಳ್ಳಿಲ್ಲ,ಕಾಳಜಿ ವಹಿಸಿದರು, ಬಿಜೆಪಿಯವರಿಗೆ ನನ್ಮೇಲೆ ತುಂಬಾ ಪ್ರೀತಿ’: CM ಡಿ.ಕೆ. ಶಿವಕುಮಾರ್; Video

ಒಂದು ಕಾಣದ ಕಣದ ಹುಡುಕಾಟ (ವಿಜ್ಞಾನ ವಿಶೇಷ)