ದೇಶ

ಗಂಗಾ ಶುದ್ಧೀಕರಣಕ್ಕೆ 1 ಸಾವಿರ ರು, ಕಳುಹಿಸಿದ ಬಾಲಕನಿಗೆ ಮೋದಿ ಪ್ರಶಂಸೆ ಪತ್ರ

Vishwanath S
ನವದೆಹಲಿ: ಗಂಗಾ ಶುದ್ಧೀಕರಣ ಯೋಜನೆಗೆ ಬಳಸುವಂತೆ 1 ಸಾವಿರ ರುಪಾಯಿ ನಗದು ಹಣವನ್ನು ಕಳುಹಿಸಿದ್ದ ಚೆನ್ನೈನ ಹತ್ತು ವರ್ಷದ ಬಾಲಕನಿಗೆ ಪ್ರಧಾನಿ ಮೋದಿ ಅವರು ಪ್ರಶಂಸಿಸಿರು ಪತ್ರ ಬಂದಿದೆ. 
10 ವರ್ಷದ ಜಿ ಶಶಾಂಕ್ ಎಂಬಾತ ನಾನು ರಾಷ್ಟ್ರ ಸೇನೆ ಮಾಡಲು ಬಯಸುತ್ತೇನೆ. ಹೀಗಾಗಿ ನನಗೆ ಶಾಲೆಯಲ್ಲಿ ಬಹುಮಾನವಾಗಿ ಬಂದಿರುವ 1 ಸಾವಿರ ರುಪಾಯಿನ್ನು ರಾಷ್ಟ್ರೀಯ ಪರಿಹಾರ ನಿಧಿಗೆ ಕಳುಹಿಸುತ್ತಿದ್ದೇನೆ. ದಯವಿಟ್ಟು ಈ ಹಣವನ್ನು ನೀವು ಗಂಗಾ ಶುದ್ಧೀಕರಣ ಯೋಜನೆಗೆ ಬಳಸಿಕೊಳ್ಳಬೇಕು. ಗಂಗೆಯು ನಮ್ಮ ದೇಶದ ಪವಿತ್ರ ನದಿ. ನಾವು ಅದರ ಶುದ್ಧತೆಯನ್ನು ಕಾಪಾಡಬೇಕು ಎಂದು ಶಶಾಂಕ್ ಮೋದಿಗೆ ಬರೆದಿರುವ ಪತ್ರದಲ್ಲಿ ವಿನಂತಿಸಿದ್ದ. 
ಶಶಾಂಕ್ ನ ರಾಷ್ಟ್ರ ಸೇವಾ ಕಾಳಜಿಯನ್ನು ಮೆಚ್ಚಿ ಪ್ರಧಾನಿ ಕಾರ್ಯಾಲಯದ ಅಧೀನ ಕಾರ್ಯದರ್ಶಿ ಪಿಕೆ ಬಾಲಿ ಅವರು ಪ್ರಧಾನಿ ಅಪೇಕ್ಷೆಯ ಪ್ರಕಾರ ಶಶಾಂಕ್ ಗೆ ಮರು ಪತ್ರ ಬರೆದಿದ್ದಾರೆ. 
ಇನ್ನು ನಮಾಮಿ ಗಂಗಾ ಯೋಜನೆಯಡಿ ಮೋದಿ ಸರ್ಕಾರ 20 ಸಾವಿರ ಕೋಟಿ ವೆಚ್ಚದ ಯೋಜನೆಯನ್ನು ರೂಪಿಸಿ ಅನುಷ್ಠಾನಿಸುತ್ತಿದೆ. ಇನ್ನು 1980ರ ಮಧ್ಯ ಭಾಗದಲ್ಲೇ ಗಂಗಾ ನದಿ ರಕ್ಷಣೆಯ ಕಾರ್ಯವನ್ನು ಆರಂಭಿಸಲಾಗಿತ್ತು. ಆದರೆ ಕಳೆದ 3 ದಶಕಗಳಲ್ಲಿ ಗಂಗಾ ನದಿ ಇನ್ನಷ್ಟು ಮಲಿನವಾಗಿದೆ. 
SCROLL FOR NEXT