ಭಾರತೀಯ ಸೇನೆ ಬದಲು ಅಮೆರಿಕ ಯೋಧರ ಚಿತ್ರ; ವಿವಾದಕ್ಕೆ ಕಾರಣವಾಯ್ತು ಬಿಜೆಪಿ ಪೋಸ್ಟರ್ 
ದೇಶ

ಭಾರತೀಯ ಸೇನೆ ಬದಲು ಅಮೆರಿಕ ಯೋಧರ ಚಿತ್ರ; ವಿವಾದಕ್ಕೆ ಕಾರಣವಾಯ್ತು ಬಿಜೆಪಿ ಪೋಸ್ಟರ್

ಸೀಮಿತ ದಾಳಿ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸಲು ಸ್ಥಳೀಯ ಬಿಜೆಪಿ ನಾಯಕರು ಹಾಕಿರುವ ಪೋಸ್ಟರ್ ವೊಂದು ಇದೀಗ ವಿವಾದಕ್ಕೀಡಾಗಿದೆ...

ವಾರಣಾಸಿ: ಸೀಮಿತ ದಾಳಿ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸಲು ಸ್ಥಳೀಯ ಬಿಜೆಪಿ ನಾಯಕರು ಹಾಕಿರುವ ಪೋಸ್ಟರ್ ವೊಂದು ಇದೀಗ ವಿವಾದಕ್ಕೀಡಾಗಿದೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆ ಈ ಹಿಂದೆ ಸೀಮಿತ ದಾಳಿ ನಡೆಸಿತ್ತು. ಇದನ್ನೇ ತಮ್ಮ ಸಾಧನೆಯೆಂದು ಬಿಜೆಪಿ ಬಿಂಬಿಸಿಕೊಳ್ಳಲು ಯತ್ನಿಸುತ್ತಿದೆ ಎಂಬ ಹಲವು ಟೀಕೆಗಳು ವಿರೋಧ ಪಕ್ಷದ ನಾಯಕರಿಂದ ವ್ಯಕ್ತವಾಗಿತ್ತು.

ಇದರ ಬೆನ್ನಲ್ಲೇ ವಾರಣಾಸಿಯ ಕೆಲ ಸ್ಥಳೀಯ ಬಿಜೆಪಿ ನಾಯಕರು ಸೀಮಿತ ದಾಳಿಯನ್ನು ಹಿಡಿದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸಲು ಪೋಸ್ಟರ್ ವೊಂದನ್ನು ಹಾಕಿದ್ದಾರೆ.

ವಾರಣಾಸಿಯಲ್ಲಿ ಬಿಜೆಪಿ ಹಾಕಿರುವ ಪೋಸ್ಟರ್ ಇದೀಗ ವಿವಾದಕ್ಕೆ ಕಾರಣವಾಗಿದೆ. 10 ವರ್ಷಗಳ ಹಿಂದೆ ಇರಾಕ್ ನಲ್ಲಿ ಹೋರಾಡಿದ ಅಮೆರಿಕ ರಾಷ್ಟ್ರದ ಯೋಧರ ಚಿತ್ರವನ್ನು ಬಿಜೆಪಿ ತನ್ನ ಪೋಸ್ಟರ್ ನಲ್ಲಿ ಹಾಕಿದೆ.

ಭಾರತೀಯ ಸೇನೆ ಬದಲು ಅಮೆರಿಕ ಸೇನೆಯನ್ನು ಹಾಕಿರುವ ಈ ಪೋಸ್ಟರ್ ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಪ್ರದೀಪ್ ಅಗ್ರಹಾರಿ, ನವೀನ್ ಕಪೂರ್, ಮನೀಶ್ ಕಪೂರ್ ಮತ್ತು ಇನ್ನಿತರೆ ಸ್ಥಳೀಯ ಬಿಜೆಪಿ ನಾಯಕರಿದ್ದಾರೆ.

10 ವರ್ಷಗಳ ಹಿಂದೆ ಇರಾಕ್ ನ ವೈನಾಟ್ ನಲ್ಲಿ ತೆಗೆದ ಅಮೆರಿಕದ ಸ್ಕ್ರೀಮಿಂಗ್ ಈಗಲ್ಸ್ ಸೇನೆಯ 101 ಏರ್ ಬೋರ್ನ್ ಡಿವಿಷನ್ ನ ಸೈನಿಕರ ಫೋಟೋ ಇದಾಗಿದೆ. ಬ್ಯಾಂಡ್ ಆಫ್ ಬ್ರದರ್ಸ್ ಎಂಬ ಮಿನಿಸಿರೀಸ್ ಮೂಲಕ ಈ ಚಿತ್ರ ಪ್ರಸಿದ್ಧಿಯನ್ನು ಪಡೆದುಕೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಬಗ್ಗೆ ಜಾಗತಿಕವಾಗಿ ಅತ್ಯುತ್ತಮ ಸ್ಪಷ್ಟ ಅಭಿಪ್ರಾಯ- ಟ್ರಂಪ್ ಹೇಳಿಕೆ ಬೆನ್ನಲ್ಲೇ MEA ಪ್ರತಿಕ್ರಿಯೆ!

ಮಾಜಿ ಸಚಿವ ಬಿ. ಸಿ. ನಾಗೇಶ್ ನಿಧನ: ನಾಳೆ ತಿಪಟೂರಿನಲ್ಲಿ ಅಂತ್ಯಕ್ರಿಯೆ!

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಕಲಿ ಔಷಧಿ ಮರುಪ್ಯಾಕಿಂಗ್ ಬೃಹತ್ ಜಾಲ ಪತ್ತೆ: 5 ಕೋಟಿ ರೂ. ಮೌಲ್ಯದ ವಸ್ತುಗಳು ವಶಕ್ಕೆ!

ಪಸಿಂದು ಗೋಲ್ಡನ್ ಡಕೌಟ್: ಆಡಿದ 2ನೇ ಪಂದ್ಯದಲ್ಲೇ ಕುಂಬ್ಳೆ ದಾಖಲೆ ಸರಿಗಟ್ಟಿದ Team India ಯುವ ಸ್ಪಿನ್ನರ್ ಮಾನವ್ ಸುತಾರ್!

ದೇವೇಗೌಡರ ಕೂಸನ್ನು ಹಾದಿ ತಪ್ಪಿಸಿ ಯಾರಪ್ಪನಿಗೆ ಕೊಡಲು ಹೊರಟಿದ್ದೀರಿ ಮಿಸ್ಟರ್ ಡಿ.ಕೆ. ಶಿವಕುಮಾರ್? ತಾಕತ್ ಇದ್ರೆ ಚರ್ಚೆಗೆ ಬನ್ನಿ, ಕುಮಾರಸ್ವಾಮಿ ಸವಾಲು!