ಸಾವ್ಜಿ ಧೋಲ್ಕಿಯಾ 
ದೇಶ

ದೀಪಾವಳಿ ಧಮಾಕ! ಉದ್ಯೋಗಿಗಳಿಗೆ 400 ಫ್ಲ್ಯಾಟ್ಸ್, 1260 ಕಾರು ಗಿಫ್ಟ್ ನೀಡಿದ ಉದ್ಯಮಿ

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಬೋನಸ್, ಗಿಫ್ಟ್ ಕೊಡುವುದು ಸಂಪ್ರದಾಯ....

ಸೂರತ್: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಬೋನಸ್, ಗಿಫ್ಟ್ ಕೊಡುವುದು ಸಂಪ್ರದಾಯ. ಆದರೆ ಸೂರತ್ ಮೂಲದ ವಜ್ರದ ವ್ಯಾಪಾರಿ ತನ್ನ ಉದ್ಯೋಗಿಗಳಿಗೆ ಪ್ರತಿವರ್ಷ ನೀಡುವ ಗಿಫ್ಟ್ ಬಗ್ಗೆ ಕೇಳಿದರೆ ನಿಮಗೆ ಅಚ್ಚರಿಯಾಗುತ್ತೆ.

ಹೌದು. ಕಲಿಯುಗದ ಈ ಕೊಡುಗೈ ದಾನಿ ಸೂರತ್ ನ ಕೋಟ್ಯಧೀಶ್ವರ ವಜ್ರ ವ್ಯಾಪಾರಿಯಾದ ಸಾವ್ಜಿ ಧೋಲ್ಕಿಯಾ ಅವರು ತನ್ನ ಉದ್ಯೋಗಿಗಳಿಗೆ ಈ ಬಾರಿ 400 ಫ್ಲ್ಯಾಟ್ಸ್ ಹಾಗೂ 1260 ಕಾರುಗಳನ್ನು ದೀಪಾವಳಿ ಬೋನಸ್ ಆಗಿ ನೀಡಿದ್ದಾರೆ!

ಧೋಲ್ಕಿಯಾ ಅವರ ಹರೇ ಕೃಷ್ಣಾ ಎಕ್ಸ್ ಪೋರ್ಟ್ಸ್ ಸಂಸ್ಥೆ ತನ್ನ ಉದ್ಯೋಗಿಗಳಿಗಾಗಿ ಈ ವರ್ಷದ ದೀಪಾವಳಿಗೆ ಬರೋಬ್ಬರಿ 51 ಕೋಟಿ ರೂಪಾಯಿಯಷ್ಟು ಖರ್ಚು ಮಾಡಿದೆ. ಸುಮಾರು 1,716 ಉದ್ಯೋಗಿಗಳು ಕಂಪನಿಯ ಉತ್ತಮ ಕೆಲಸಗಾರರು ಎಂದು ಹೆಸರಿಸಲಾಗಿತ್ತಂತೆ.

ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ಬಾರಿಯ ದೀಪಾವಳಿ ಬೋನಸ್ ಬಗ್ಗೆ ಘೋಷಣೆ ಮಾಡಲಾಗಿದೆ. ಕಳೆದ ವರ್ಷ ಧೋಲ್ಕಿಯಾ ಅವರ ಕಂಪನಿ ತನ್ನ ಉದ್ಯೋಗಿಗಳಿಗೆ 491 ಕಾರು ಹಾಗೂ 200 ಫ್ಲ್ಯಾಟ್ಸ್ ಗಳನ್ನು ಗಿಫ್ಟ್ ಆಗಿ ಕೊಟ್ಟಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

T20 World Cup 2026: ಅಭಿಷೇಕ್, ಹಾರ್ದಿಕ್ ಅಬ್ಬರ; ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT