ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ನಿಷ್ಕ್ರಿಯವಾಗಿರುವ ಬಲಗೈ: ದಾಖಲೆಗಳಿಗೆ ಎಡಗೈ ಹೆಬ್ಬೆರಳು ಒತ್ತಿದ ಸಿಎಂ ಜಯಲಲಿತಾ

ಅನಾರೋಗ್ಯದಿಂದ ಆಸ್ಪತ್ರೆ ಸೇರಿರುವ ತಮಿಳುನಾಡು ಸಿಎಂ ಜಯಲಲಿತಾ, ನವೆಂಬರ್‌ 19 ರಂದು ಉಪಚುನಾವಣೆಗೆ ಸ್ಪರ್ಧಿಸುತ್ತಿರುವ ತಮ್ಮ ಪಕ್ಷದ ಅಭ್ಯರ್ಥಿಯೊಬ್ಬರ ..

ಜಯಲಲಿತಾ
Shilpa D
Updated On : 29 Oct 2016, 11:38 am

ಚೆನ್ನೈ: ಅನಾರೋಗ್ಯದಿಂದ ಆಸ್ಪತ್ರೆ ಸೇರಿರುವ ತಮಿಳುನಾಡು ಸಿಎಂ ಜಯಲಲಿತಾ, ನವೆಂಬರ್‌ 19 ರಂದು ಉಪಚುನಾವಣೆಗೆ ಸ್ಪರ್ಧಿಸುತ್ತಿರುವ ತಮ್ಮ ಪಕ್ಷದ ಅಭ್ಯರ್ಥಿಯೊಬ್ಬರ ನಾಮಪತ್ರ, ಬಿ-ಫಾರಂಗೆ ಸಂಬಂಧಿಸಿದ ದಾಖಲೆಗಳಿಗೆ ಎಡಗೈ ಹೆಬ್ಬೆಟ್ಟು ಒತ್ತಿದ್ದಾರೆ.

ನವೆಂಬರ್‌ 19ರಂದು ತಿರುಪುರನಾಗುಂಡ್ರಂ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ. ಎಐಡಿಡಿಎಂಕೆ ಪಕ್ಷದಿಂದ ಎ.ಕೆ.ಬೋಸ್‌ ಸ್ಪರ್ಧಿಸುತ್ತಿದ್ದಾರೆ. ಜಯಾ ಎಐಡಿಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದು, ಚುನಾವಣೆಗೆ ಸ್ಪರ್ಧಿಸುವ ಅರ್ಭ್ಯರ್ಥಿಗಳ ಬಿ-ಫಾರಂಗೆ ಸಹಿ ಹಾಕುವುದು ಕಡ್ಡಾಯ. ಅಂತೆಯೇ ಅಸ್ವಸ್ಥರಾಗಿ ಸಹಿ ಹಾಕದ ಸ್ಥಿತಿಯಲ್ಲಿರೋ ಕಾರಣಕ್ಕೆ ಜಯಾ ಎ.ಕೆ.ಬೋಸ್ ಅವರ ಬಿ-ಪಾರಂ ಸೇರಿದಂತೆ ಹಲವು ಪತ್ರಗಳಿಗೆ ಎಡಗೈ ಹೆಬ್ಬೆರಳ ಮುದ್ರೆ ಹಾಕಿದ್ದಾರೆ.

ಒಟ್ಟು ಐದು ಕಡೆ ಜಯಾ ಎಡಗೈನ ಹೆಬ್ಬೆರಳಿನ ಹೆಬ್ಬೆಟ್ಟು ಒತ್ತಿದ್ದಾರೆ. ಜಯ ಹೆಬ್ಬೆರಳು ಮುದ್ರೆ ಹಾಕಿರುವ ದಾಖಲೆಗಳನ್ನು ಎಐಎಡಿಎಂಕೆ ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ. ಮದ್ರಾಸ್‌ ಮೆಡಿಕಲ್ ಕಾಲೇಜ್ ವೈದ್ಯರು ಜಯಾ ಹೆಬ್ಬೆಟ್ಟನ್ನು ದೃಢೀಕರಿಸಿರುವುದರಿಂದ ಚುನಾವಣಾ ಆಯೋಗ ಬೋಸ್ ಅವರ ನಾಮಪತ್ರವನ್ನು ಸ್ವೀಕರಿಸಿದೆ.  

ಆನಾರೋಗ್ಯದ ಕಾರಣದಿಂದಾಗಿ ಚೆನ್ನೈ ಅಪೊಲೋ ಆಸ್ಪತ್ರೆಗೆ ದಾಖಲಾಗಿರವ ಜಯಲಲಿತಾ ಚಿಕಿತ್ಸೆ ಪಡೆಯುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments