ಯೋಧರೊಂದಿಗೆ ವಿವಿಧ ಧಾರ್ಮಿಕ ಮುಖಂಡರ ದೀಪಾವಳಿ ಆಚರಣೆ
ಅಮೃತಸರ್: ವಾಘಾ ಗಡಿಗೆ ಭೇಟಿ ನೀಡಿದ ವಿವಿಧ ಸಮುದಾಯಗಳ ಧಾರ್ಮಿಕ ಮುಖಂಡರು ಭಾರತೀಯ ಯೋಧರ ಜತೆ ದೀಪಾವಳಿ ಆಚರಿಸಿದ್ದಾರೆ.
ಗಡಿಯಲ್ಲಿ ನಿಂತು ದೇಶಕ್ಕೆ ರಕ್ಷಣೆ ಮಾಡುತ್ತಿರುವ ಯೋಧರೊಂದಿಗೆ ದೀಪಾವಳಿ ಆಚರಿಸುವ ಮೂಲಕ ಧಾರ್ಮಿಕ ಮುಖಂಡರು ಯೋಧರಲ್ಲಿ ಮತ್ತಷ್ಟು ಆತ್ಮವಿಶ್ವಾಸ ತುಂಬಿದ್ದಾರೆ. ರಿಶಿಕೇಶದ ಪರ್ಮಾರ್ಥ ನಿಕೇತನ್ ಆಶ್ರಮದ ಸ್ವಾಮಿ ಚಿದಾನಂದ ಸರಸ್ವತಿ, ಅಹಿಂಸಾ ವಿಶ್ವಭಾರ್ತಿ ಆಶ್ರಮದ ಲೋಕೇಶ್ ಮುನಿ, ಆಲ್ ಇಂಡಿಯಾ ಇಮಾಮ್ ಆರ್ಗನೈಸೇಷನ್ ಮುಖಂಡ ಇಮಾಮ್ ಉಮರ್ ಮಹ್ಮದ್ ಹಾಗೂ ಗೋಲ್ಡನ್ ಟೆಂಪಲ್ ನ ಸಂತ ಗ್ಯಾನಿ ಗುರ್ಬಚನ್ ಸಿಂಗ್ ಸೇರಿದಂತೆ ಧಾರ್ಮಿಕ ಮುಖಂಡರು ವಾಘಾ ಗಡಿಗೆ ತೆರಳಿ ದೀಪಾವಳಿ ಆಚರಿಸಿದರು.
ಗಡಿಯಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಿದ ಧಾರ್ಮಿಕ ಮುಖಂಡರು ರಾಷ್ಟ್ರೀಯ ಸಮಗ್ರತೆ, ಏಕತೆ, ಶಾಂತಿ ಮತ್ತು ಸಾಮರಸ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು.
ಬಂಧು ಬಳಗವನ್ನು ಬಿಟ್ಟು ಹಬ್ಬದ ಸಮಯದಲ್ಲೂ ಗಡಿಯಲ್ಲಿ ದೇಶ ಕಾಯುವ ಯೋಧರಿಗೆ ಹಬ್ಬದ ಶುಭಾಶಯ ಕೋರಲು ಪ್ರಧಾನಿ ಮೋದಿ ಕರೆ ಕೊಟ್ಟಿದ್ದರು. ಈ ಆಂದೋಲನಕ್ಕೆ ಬೆಂಬಲ ಸೂಚಕವಾಗಿ ಧಾರ್ಮಿಕರು ಮುಖಂಡರು ವಾಘಾ ಗಡಿಗೆ ತೆರಳಿ ಬೆಳಕಿನ ಹಬಬ್ ಆಚರಿಸಿದ್ದಾರೆ.