ಮುಂಬಯಿ: ಹಿರಿಯ ಕಾರ್ಮಿಕ ನಾಯಕ ಶರದ್ ರಾವ್ (76) ನಿಧನ ಹೊಂದಿದ್ದಾರೆ.
ಮುಂಬೈನ ಬಿಇಎಸ್ ಟಿ, ಟ್ಯಾಕ್ಸಿ, ಆಟೋ ಸೇರಿದಂತೆ ಅನೇಕ ಕಾರ್ಮಿಕ ಯೂನಿಯನ್ ಗಳ ನಾಯಕರಾಗಿದ್ದರು. 1957ರಿಂದ 1967ರ ತನಕ ಹಿಂದೂಸ್ತಾನ್ ಲಿವರ್ ಲಿಮಿಟೆಡ್ ನಲ್ಲಿ ಯೂನಿಯನ್, ನಂತರ ಟ್ರೇಡ್ ಯೂನಿಯನ್ ಹೋರಾಟಗಳಲ್ಲಿ ಸಕ್ರಿಯರಾಗಿದ್ದರು.
1970ರಲ್ಲಿ ಬಾಂಬೆ ಗುಮಾಸ್ತ ಯೂನಿಯನ್, ಸೇವ್ ಅಕ್ಟ್ರಾಯ್ ಚಳವಳಿಯ ಮುಂಚೂಣಿಯಲ್ಲಿದ್ದರು. ಹತ್ತು-ಹಲವು ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು
ಎರಡು ಸಲ ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಗಾಗಿ ಶರದ್ ರಾವ್ ಸ್ಪರ್ಧಿಸಿದ್ದರು. ಮೃತರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ಶನಿವಾರ ಮೃತರ ಅಂತ್ಯಕ್ರಿಯೆ ನಡೆಯಲಿದೆ.