ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ 
ದೇಶ

ಸೆಕ್ಸ್ ಸಿಡಿ ವಿವಾದ: ರಾಜಕೀಯ ಅಂಧತ್ವದಲ್ಲಿರುವ ಆಪ್ ಅಧಿಕಾರದ ದಾಹದಲ್ಲಿದೆ- ಕಾಂಗ್ರೆಸ್

ಸೆಕ್ಸ್ ಟೇಪ್ ಹಗರಣದಿಂದ ಸಾಕಷ್ಟು ವಿವಾದಕ್ಕೀಡಾಗಿರುವ ಆಮ್ ಆದ್ಮಿ ಪಕ್ಷವು ರಾಜಕೀಯ ಅಂಧತ್ವದಲ್ಲಿದ್ದು, ಅಧಿಕಾರದ ದಾಹದಲ್ಲಿದೆ ಎಂದು ಕಾಂಗ್ರೆಸ್ ಶನಿವಾರ ಹೇಳಿದೆ...

ನವದೆಹಲಿ: ಸೆಕ್ಸ್ ಟೇಪ್ ಹಗರಣದಿಂದ ಸಾಕಷ್ಟು ವಿವಾದಕ್ಕೀಡಾಗಿರುವ ಆಮ್ ಆದ್ಮಿ ಪಕ್ಷವು ರಾಜಕೀಯ ಅಂಧತ್ವದಲ್ಲಿದ್ದು, ಅಧಿಕಾರದ ದಾಹದಲ್ಲಿದೆ ಎಂದು ಕಾಂಗ್ರೆಸ್ ಶನಿವಾರ ಹೇಳಿದೆ.

ಈ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಅವರು, ಆಮ್ ಆದ್ಮಿ ಪಕ್ಷ ತಾನು ಎಳೆದ ಬಲೆಗೆ ತಾನೇ ಸಿಲುಕಿಕೊಂಡಿದೆ. ಕೇಜ್ರಿವಾಲ್ ಅವರು ನೈತಿಕತೆಯನ್ನು ಮರೆತು ರಾಜಕೀಯದಲ್ಲಿ ತೊಡಗಿಕೊಂಡಿದ್ದಾರೆ. ರಾಜಕೀಯವಾಗಿ ಅಂಧತ್ವದಲ್ಲಿರುವ ವ್ಯಕ್ತಿಗಳು ಅಧಿಕಾರದ ದಾಹದಲ್ಲಿರುತ್ತಾರೆ. ಇಂತಹ ವ್ಯಕ್ತಿಗಳು ಅಧಿಕಾರಕ್ಕೆ ಬಂದಾಗ ಈ ರೀತಿಯ ಘಟನೆಗಳು ನಡೆಯುವುದು ಸಾಮಾನ್ಯವಾಗುತ್ತದೆ ಎಂದು ಹೇಳಿದ್ದಾರೆ.

ಸೆಕ್ಸ್ ಟೇಪ್ ಹಗರಣ ಸಂಬಂಧಿಸಿದಂತೆ ಮಾಜಿ ಸಚಿವ ಸಂದೀಪ್ ಕುಮಾರ್ ಅವರನ್ನು ಸಮರ್ಥಿಸಿಕೊಂಡಿದ್ದ ಆಪ್ ವಕ್ತಾರ ಅಶುತೋಷ್, ಸೆಕ್ಸ್ ಜೀವನದ ಒಂದು ಭಾಗ ವಾಗಿದೆ. ಪರಸ್ಪರ ಸಮ್ಮತಿಯಿಂದ ನಡೆದಿರುವ ಘಟನೆ ಇದಾಗಿದೆ. ಭಾರತೀಯ ಇತಿಹಾಸದಲ್ಲಿ ನಮ್ಮ ನಾಯಕರು, ಹೀರೋಗಳು ಸಾಮಾಜಿಕ ಚೌಕಟ್ಟನ್ನು ಮೀರಿ ಅವರಿಗೆ ಇಷ್ಟವಿದ್ದವರೊಂದಿಗೆ ಇದ್ದ ಉದಾಹರಣೆಗಳು ಸಾಕಷ್ಟಿವೆ.

ನೆಹರು ಹಾಗು ಎಡ್ವಿನಾ ಮೌಂಟ್ ಬ್ಯಾಟನ್ ಅವರ ಸಂಬಂಧದ ಬಗ್ಗೆ ಇಡೀ ವಿಶ್ವಕ್ಕೇ ಗೊತ್ತಿತ್ತು. ಅವರಿಬ್ಬರ ನಡುವಿನ ಪ್ರೀತಿ ನೆಹರು ಕೊನೆಯುಸಿರೆಳೆಯುವವರೆಗೂ ಇತ್ತು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ವಿವಾಹವಾಗದೆ ಇದ್ದರು ತಾವು ಬ್ರಹ್ಮಚಾರಿಯಲ್ಲ ಎಂದು ಸಂಸತ್ ನಲ್ಲಿಯೇ ಹೇಳಿದ್ದರು. ಅವರು ತಮ್ಮ ಸ್ನೇಹಿತೆಯೊಂದಿಗೆ ಜೀವಿಸಿದ್ದರು ಸಮಾಜ ಅದನ್ನು ಆಕ್ಷೇಪಿಸಲಿಲ್ಲ. ಆದ್ದರಿಂದ ಸೆಕ್ಸ್ ಜೀವನದ ಭಾಗವಾಗಿದೆ ಎಂದು ಹೇಳಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West-Asia war: ಅಮೆರಿಕಾ-ಇರಾನ್ ಸಂಘರ್ಷ ಮತ್ತಷ್ಟು ತೀವ್ರ; ಹಾರ್ಮುಜ್ ಜಲಸಂಧಿ ಮೇಲೆ ನೌಕಾ ದಿಗ್ಬಂಧನ, ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಆತಂಕ

'ಅಲ್ಪಸಂಖ್ಯಾತರ ಚಾಂಪಿಯನ್‌ ಎನಿಸಿಕೊಂಡವರ ಡಬಲ್‌ ಗೇಮ್‌: ದಾವಣಗೆರೆಯಲ್ಲಿ ನಮ್ಮ ಅಭ್ಯರ್ಥಿಯನ್ನೇ ಸೋಲಿಸಲು ಯತ್ನ'

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

SCROLL FOR NEXT