ಅರವಿಂದ್ ಕೇಜ್ರಿವಾಲ್ 
ದೇಶ

ಬಿಜೆಪಿ ಕಾರ್ಯಕರ್ತೆಯರಿಂದ ದೆಹಲಿ ಸಿಎಂ ಕೇಜ್ರಿವಾಲ್‍ಗೆ ಮುತ್ತಿಗೆ

ಪಂಜಾಬ್‍ಗೆ ಹೊರಟಿದ್ದ ದೆಹಲಿ ಮುಖ್ಯಮಂತ್ರಿ ಹಾಗೂ ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರಿಗೆ ಗುರುವಾರ ದೆಹಲಿಯ ರೇಲ್ವೆ ನಿಲ್ದಾಣದಲ್ಲಿ...

ನವದೆಹಲಿ: ಪಂಜಾಬ್‍ಗೆ ಹೊರಟಿದ್ದ ದೆಹಲಿ ಮುಖ್ಯಮಂತ್ರಿ ಹಾಗೂ ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರಿಗೆ ಗುರುವಾರ ದೆಹಲಿಯ ರೇಲ್ವೆ ನಿಲ್ದಾಣದಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತರು ಮುತ್ತಿಗೆ ಹಾಕಿದ್ದ ಘಟನೆ ಗುರುವಾರ ನಡೆಯಿತು.

ಆಮ್ ಆದ್ಮಿ ಪಕ್ಷದ ಉಚ್ಚಾಟಿತ ಶಾಸಕ ಸಂದೀಪ್ ಕುಮಾರ್ ಅವರ ಬಗ್ಗೆ ಕೇಜ್ರಿವಾಲ್ ಅವರ ಮೌನವನ್ನು ಪ್ರಶ್ನಿಸಿ ದೆಹಲಿ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಕಮಲಜೀತ್ ಸೆಹ್ರಾವತ್ ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತೆಯರು ದೆಹಲಿ ಸಿಎಂ ವಿರುದ್ಧ ಇಂದು ಪ್ರತಿಭಟಿಸಿದರು. ಆದರೆ ಪೊಲೀಸರ ಭದ್ರತಾ ಲೋಪದಿಂದಾಗಿ ಮಹಿಳಾ ಕಾರ್ಯಕರ್ತರು ಕೇಜ್ರಿವಾಲ್ ಅವರನ್ನು ಸುತ್ತುವರಿದು, ಮುತ್ತಿಗೆ ಹಾಕಿದರು.

ಬಿಜೆಪಿ ಕಾರ್ಯಕರ್ತೆಯರು ಕೇಜ್ರಿವಾಲ್ ಅವರನ್ನು ಮುತ್ತಿಗೆ ಹಾಕಿ ಬೈಯುತ್ತಿರುವಾಗ ದೆಹಲಿ ಪೊಲೀಸರು ಅಸಹಾಯಕರಾಗಿ ನಿಂತಿದ್ದರು,  ದೆಹಲಿ ಪೊಲೀಸರ ಕರ್ತವ್ಯ ಲೋಪದ ಬಗ್ಗೆ ಕಿಡಿ ಕಾರಿದ ಆಪ್ ನಾಯಕ ಸಂಜಯ್ ಸಿಂಗ್  ಇದೇ ಕಾರ್ಯಕರ್ತೆಯರು ಮಾಜಿ ಕೇಂದ್ರ ಸಚಿವ ನಿಹಾಲ್ ಚಂದ್ ಮತ್ತು ಬಾಬು ಲಾಲ್ ಅವರನ್ನು ಯಾಕೆ ಪ್ರಶ್ನಿಸಿಲ್ಲ ಎಂದು ಟ್ವೀಟ್ ಮಾಡಿದ್ದಾರೆ .

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಬೆಂಗಳೂರು: ಮಾಜಿ ಪ್ರೇಯಸಿ ಕರೆದಳೆಂದು ಮನೆಗೆ ಹೋದ ಪ್ರಿಯಕರ ದುರಂತ ಸಾವು: ಅಷ್ಟಕ್ಕೂ ಆಗಿದ್ದೇನು?

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ: ಕಣ್ಣೀರಿಟ್ಟ CM ಕಚೇರಿ ಸಿಬ್ಬಂದಿ; ಬೆಂಬಲಿಗರಿಂದ ಪ್ರತಿಭಟನೆ

IPL 2026 Eliminator: SRH ವಿರುದ್ಧ ವೈಭವ್ ಸೂರ್ಯವಂಶಿ ಸಿಕ್ಸರ್ ಸುರಿಮಳೆ, 14 ವರ್ಷ ಹಳೆಯ Chris gayle ದಾಖಲೆ ಧೂಳಿಪಟ

SCROLL FOR NEXT