ದೇಶ

ದೆಹಲಿ ವಿವಿ ವಿದ್ಯಾರ್ಥಿ ಸಂಘ ಚುನಾವಣೆ: ಎಬಿವಿಪಿಗೆ 3, ಎನ್ಎಸ್ ಯುಐ ಗೆ ಒಂದು ಸ್ಥಾನ

Srinivas Rao BV

ನವದೆಹಲಿ: ದೆಹಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘಟನೆ ಚುನಾವಣೆಯಲ್ಲಿ  ಅಖಿಲ ಭಾರತ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಸಂಘಟನೆ ತನ್ನ ಪ್ರಾಬಲ್ಯವನ್ನು ಉಳಿಸಿಕೊಂಡಿದ್ದು, ನಾಲ್ಕು ಸ್ಥಾನಗಳ ಪೈಕಿ ಮೂರೂ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ನ ಎನ್ಎಸ್ ಯುಐ ವಿದ್ಯಾರ್ಥಿ ಸಂಘಟನೆ ಒಂದು ಸ್ಥಾನದಲ್ಲಿ ಗೆಲ್ಲುವ ಮೂಲಕ ಜಂಟಿ ಕಾರ್ಯದರ್ಶಿ ಸ್ಥಾನವನ್ನು ಪಡೆದಿದೆ.

ಚುನಾವಣೆಗೆ ಸ್ಪರ್ಧಿಸಿದ್ದ ಎಬಿವಿಪಿಯ ಅಮಿತ್ ತನ್ವರ್ ದೆಹಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಪ್ರಿಯಾಂಕಾ ಹಾಗೂ ಅಂಕಿತ್ ಸಿಂಗ್ ಅವರು ಅನುಕ್ರಮವಾಗಿ ಉಪಾಧ್ಯಕ್ಷ ಹಾಗೂ ಕಾರ್ಯದರ್ಶಿ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ ಎಂದು ದೆಹಲಿ ವಿವಿ ವಿದ್ಯಾರ್ಥಿ ಸಂಘಟನೆ ಚುನಾವಣೆಯ ಫಲಿತಾಂಶವನ್ನು ಘೋಷಿಸಿದ ಚುನಾವಣಾ ಅಧಿಕಾರಿ ಡಿಎಸ್ ರಾವತ್ ತಿಳಿಸಿದ್ದಾರೆ. 
ಇನ್ನು ಎನ್ಎಸ್ ಯುಐ ನಿಂದ ಸ್ಪರ್ಧಿಸಿ ಗೆದ್ದಿರುವ ಮೋಹಿತ್ ಗರಿದ್ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಎಬಿವಿಪಿಯ ಹ್ಯಾಟ್ರಿಕ್ ಗೆಲುವಿಗೆ ಕಡಿವಾಣ ಹಾಕಿದ್ದಾರೆ. ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವ ಅಮಿತ್ ತನ್ವರ್  16,357 ಗಳಿಸಿದ್ದರೆ, ಪ್ರಿಯಾಂಕಾ 15,592 ಮತ, ಅಂಕಿತ್ ಸಿಂಗ್ 15,518 ಮತಗಳನ್ನು ಪಡೆದಿದ್ದಾರೆ. 

SCROLL FOR NEXT