ಸಾಂದರ್ಭಿಕ ಚಿತ್ರ 
ದೇಶ

ಭಾರತದ ಶಾಲೆಗಳಲ್ಲಿ ಇನ್ನೂ ಲಿಂಗಾನುಪಾತ ಇದೆ: ಯುನೆಸ್ಕೋ ವರದಿ

ಯುನೆಸ್ಕೋದ 2016ನೇ ಸಾಲಿನ ಜಾಗತಿಕ ಶಿಕ್ಷಣ ಉಸ್ತುವಾರಿ ವರದಿ ಪ್ರಕಾರ, ಭಾರತದ ಶಾಲೆಗಳಲ್ಲಿ...

ನವದೆಹಲಿ: ಯುನೆಸ್ಕೋದ 2016ನೇ ಸಾಲಿನ ಜಾಗತಿಕ ಶಿಕ್ಷಣ ಉಸ್ತುವಾರಿ ವರದಿ ಪ್ರಕಾರ, ಭಾರತದ ಶಾಲೆಗಳಲ್ಲಿ ಇನ್ನೂ ಲಿಂಗ ತಾರತಮ್ಯ ಕಂಡುಬರುತ್ತಿದೆ.ಶಿಕ್ಷಣ ಪಡೆಯುವಿಕೆ, ಬಾಲಕಿಯರ ಬಗ್ಗೆ ಶಿಕ್ಷಕರಲ್ಲಿರುವ ಅಭಿಪ್ರಾಯಗಳು ಬೇಧವಾಗಿದೆ ಎನ್ನುತ್ತದೆ 2016ರ ಯುನೆಸ್ಕೋದ ಜಾಗತಿಕ ಶೈಕ್ಷಣಿಕ ಉಸ್ತುವಾರಿ ವರದಿ.
ಆದರೆ ಪ್ರೌಢ ಶಿಕ್ಷಣಕ್ಕೆ ದಾಖಲಾಗುವ ಬಾಲಕಿಯರ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಜಾಸ್ತಿಯಾಗಿದೆ. 2014ರ ಅನುಪಾತದಂತೆ ಶೇಕಡಾ 39ರಿಂದ 46ಕ್ಕೇರಿದೆ. ಬಾಲಕಿಯರಿಗೆ ಮತ್ತು ಬಾಲಕರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ, ಹೆಣ್ಣು ಮಕ್ಕಳಿಗೆ ಶಾಲೆಗಳಲ್ಲಿ ಪೂರಕ ವಾತಾವರಣ ಪ್ರೌಢ ಶಿಕ್ಷಣಕ್ಕೆ ದಾಖಲಾಗುವ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಾಗಲು ಕಾರಣ ಎಂದು ಯುನೆಸ್ಕೋ ಅಧ್ಯಯನ ತಿಳಿಸಿದೆ.
ಆದರೆ ಗಣಿತ ಸೇರಿದಂತೆ ಮೂಲ ಕೌಶಲ್ಯ ಕಲಿಕೆಯಲ್ಲಿ ಇನ್ನೂ ಕೂಡ ತಾರತಮ್ಯವಿದೆ. 
ಶಿಕ್ಷಕರು ಶಾಲೆಗೆ ಸರಿಯಾಗಿ ಬರದೆ ಗೈರುಹಾಜರಾಗುವುದು ಇನ್ನೊಂದು ಸಮಸ್ಯೆ. ಪ್ರೈಮರಿ ಶಾಲೆಗಳಲ್ಲಿ ಶೇಕಡಾ 25ರಷ್ಟು ಶಿಕ್ಷಕರು ಶಾಲೆಗೆ ಕೆಲಸಕ್ಕೆ ಸರಿಯಾಗಿ ಹೋಗುವುದಿಲ್ಲ. ಮತ್ತು ಶೇಕಡಾ 50ರಷ್ಟು ಶಿಕ್ಷಕರು ಮಾತ್ರ ಶಿಕ್ಷಣ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ ಎಂದು 2004ರ ವಿಶ್ವ ಬ್ಯಾಂಕ್ ವರದಿ ತಿಳಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ಶೇಕಡಾ 24ರಷ್ಟು ಶಿಕ್ಷಕರು ಕೆಲಸಕ್ಕೆ ಗೈರುಹಾಜರಾಗಿರುವುದು ಕಂಡುಬಂದಿದೆ ಎನ್ನುತ್ತದೆ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ 2015ರ ವರದಿ.
ಈ ವರ್ಷ ಇಲ್ಲಿಯವರೆಗೆ ಶಾಲೆಗಳ ಶಿಕ್ಷಕರಿಗೆ ಯಾವುದೇ ಬೋನಸ್, ಭತ್ಯೆ ನೀಡಿಲ್ಲ. 
ಶಾಲೆಗಳಲ್ಲಿನ ಶಿಕ್ಷಕರ ಕೊರತೆಯನ್ನು ತಪ್ಪಿಸಲು ಇ-ಕಲಿಕೆಯನ್ನು ಪ್ರಚುರಪಡಿಸಲು ಕಳೆದ ವರ್ಷ ಇ-ಪಾಠಶಾಲಾ ಆರಂಭಿಸಲಾಗಿದೆ ಎಂದು ಮಾನವ ಸಂಪನ್ಮೂಲ ಇಲಾಖೆ ಸಚಿವರು ತಿಳಿಸಿದ್ದಾರೆ.
ಸಾಧನೆಯಲ್ಲಿ ಹಿನ್ನಡತೆಯು ಕೂಡ ಸಮಸ್ಯೆಯಾಗಿದೆ. ಭಾರತದಲ್ಲಿನ ಶೇಕಡಾ 39ರಷ್ಟು 5 ವರ್ಷಕ್ಕಿಂತ ಕೆಳಗಿನ ಮಕ್ಕಳು ಸಾಧನೆಯಲ್ಲಿ ಕಳಪೆ ಪ್ರದರ್ಶನ ತೋರುತ್ತಾರೆ ಎನ್ನುತ್ತದೆ ಇಂಡಿಯಾಸ್ಪೆಂಡ್ ವರದಿ. ಇದು ಭಾರತದಲ್ಲಿ ಜಾಗತಿಕ ಮಟ್ಟಕ್ಕಿಂತ ಶೇಕಡಾ 15ರಷ್ಟು ಹೆಚ್ಚಾಗಿದೆ.
ಶೈಕ್ಷಣಿಕ ಸಾಧನೆಯಲ್ಲಿ ಕುಂಠಿತವಾಗಿರುವವರು ವೈಯಕ್ತಿಕ ಸಾಧನೆಯಲ್ಲಿ ಕೂಡ ಹಿಂದುಳಿಯುತ್ತಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT