ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಮ್ಯಾಂಗ್ರೋವ್ ಕಾಡು ನಾಶ: ನಟ ಕಪಿಲ್ ಶರ್ಮಾ, ಇರ್ಫಾನ್ ಖಾನ್ ವಿರುದ್ಧ ಎಫ್ ಐಆರ್!

ಬಿಎಂಸಿ ಅಧಿಕಾರಿಗಳು ಲಂಚ ಕೇಳಿದರು ಎಂದು ಆರೋಪಿಸಿ ಪ್ರಧಾನಿ ಮೋದಿ ಅವರಿಗೆ ಟ್ವೀಟ್ ಮಾಡಿದ್ದ ಖ್ಯಾತ ಕಿರುತೆರೆ ಹಾಸ್ಯನಟ ಕಪಿಲ್ ಶರ್ಮಾ ಇದೀಗ ಮತ್ತೊಂದು ವಿವಾದಲ್ಲಿ ಸಿಲುಕಿದ್ದು, ಅಪೂರ್ವ ಕಾಡು ನಾಶ ಪ್ರಕರಣ ಸಂಬಂಧ ಎಫ್ ಐ ಆರ್ ದಾಖಲಾಗಿದೆ.

ನಟ ಕಪಿಲ್ ಶರ್ಮಾ ಹಾಗೂ ಇರ್ಫಾನ್ ಖಾನ್ (ಸಂಗ್ರಹ ಚಿತ್ರ)
Srinivasa Murthy VN
Updated On : 14 Sept 2016, 1:37 am

ಮುಂಬೈ: ಬಿಎಂಸಿ ಅಧಿಕಾರಿಗಳು ಲಂಚ ಕೇಳಿದರು ಎಂದು ಆರೋಪಿಸಿ ಪ್ರಧಾನಿ ಮೋದಿ ಅವರಿಗೆ ಟ್ವೀಟ್ ಮಾಡಿದ್ದ ಖ್ಯಾತ ಕಿರುತೆರೆ ಹಾಸ್ಯನಟ ಕಪಿಲ್ ಶರ್ಮಾ ಇದೀಗ ಮತ್ತೊಂದು  ವಿವಾದಲ್ಲಿ ಸಿಲುಕಿದ್ದು, ಅಪೂರ್ವ ಕಾಡು ನಾಶ ಪ್ರಕರಣ ಸಂಬಂಧ ಎಫ್ ಐ ಆರ್ ದಾಖಲಾಗಿದೆ.

ಕಿರುತೆರೆ ಹಾಸ್ಯ ನಟ ಕಪಿಲ್ ಶರ್ಮಾ ಇತ್ತೀಚೆಗೆ ಬೃಹನ್‌ ಮುಂಬೈ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಗೋರೆಗಾಂವ್‌ ಪ್ರದೇಶದಲ್ಲಿನ ಡಿಎಚ್ ಎಲ್ ಎನ್‌ಕ್ಲೇವ್‌ನಲ್ಲಿ ಫ್ಲಾಟ್ ಖರೀದಿಸಿದ್ದು,  ಇದೇ ಫ್ಲಾಟ್ ನ 5ನೇ ಮಹಡಿಯಲ್ಲಿ ಪೀಕು ಖ್ಯಾತಿಯ ನಟ ಇರ್ಫಾನ್ ಖಾನ್ ಕೂಡ ಫ್ಲಾಟ್ ಖರೀದಿಸಿದ್ದಾರೆ. ಆದರೆ ಅಧಿಕಾರಿಗಳ ಪ್ರಕಾರ ಈ ಫ್ಲಾಟ್ ನಿರ್ಮಾಣ ಅಕ್ರಮವಾಗಿದ್ದು, ಫ್ಲಾಟ್  ನಿರ್ಮಾಣಕ್ಕಾಗಿ ಇಲ್ಲಿನ ಮ್ಯಾಂಗ್ರೋವ್ ಕಾಡನ್ನು ನಾಶಪಡಿಸಲಾಗಿದೆ ಎಂಬ ಗಂಭೀರ ಆರೋಪ ಈ ನಟರ ಮೇಲಿದೆ.

ಗೋರೆಗಾಂವ್‌ ಪ್ರದೇಶದಲ್ಲಿರುವ ಡಿಎಚ್‌ಎಲ್‌ ಎನ್‌ಕ್ಲೇವ್‌ ಕಟ್ಟಡ 9 ಅಂತಸ್ತಿನಿಂದ ಕೂಡಿದ್ದು, ನಟರಾದ ಕಪಿಲ್‌ ಶರ್ಮಾ ಮತ್ತು ಇರ್ಫಾನ್‌ ಖಾನ್‌ ಸೇರಿದಂತೆ ನೂರಾರು ಜನ ಫ್ಲ್ಯಾಟ್‌  ಹೊಂದಿದ್ದಾರೆ. ಈ ಪೈಕಿ 40-50 ನಿವಾಸಿಗಳು, ಅಕ್ರಮ ನಿರ್ಮಾಣ ಚಟುವಟಿಕೆ ಮೂಲಕ ಕಟ್ಟಡದ ಪಕ್ಕದಲ್ಲೇ ಇರುವ ಮ್ಯಾಂಗ್ರೋವ್‌ ಕಾಡುಗಳಿಗೆ ಹಾನಿ ಮಾಡಿರುವುದು ಕಂಡುಬಂದಿದೆ.  ನಿನ್ನೆಯಷ್ಟೇ ಮಹಾರಾಷ್ಟ್ರ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದಾಗ, ನಿವಾಸಿಗಳಿಂದ ನಿಯಮ ಉಲ್ಲಂಘನೆ ಮಾಡಿರುವುದು ಖಚಿತವಾಗಿದೆ.

ಈ ಹಿನ್ನೆಲೆಯಲ್ಲಿ ಕಪಿಲ್‌ ಸೇರಿ ಹಲವರ ವಿರುದ್ಧ ಮಹಾರಾಷ್ಟ್ರ ಪ್ರಾದೇಶಿಕ ನಗರ ಯೋಜನೆ ಕಾಯ್ದೆ1966ರಡಿಯಲ್ಲಿ ಎಫ್ಐಆರ್‌ ದಾಖಲಿಸಲಾಗಿದೆ. ಜೊತೆಗೆ ಶೀಘ್ರವೇ ಅರಣ್ಯ ನಿಯಮ  ಉಲ್ಲಂಘನೆ ಕುರಿತು ವರದಿ ನೀಡುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಈ ಹಿನ್ನಲೆಯಲ್ಲಿ ಕೇವಲ ಕಪಿಲ್ ಶರ್ಮಾ ಮಾತ್ರವಲ್ಲದೇ ಈ ವಿವಾದಿತ ಕಟ್ಟಡದಲ್ಲಿ ಫ್ಲಾಟ್ ಗಳನ್ನು ಖರೀದಿಸಿರುವವರ  ಪೈಕಿ 40-50 ನಿವಾಸಿಗಳ ವಿರುದ್ಧ ಎಫ್ ಐಆರ್ ದಾಖಲಾಗಿದ್ದು, ಆರೋಪ ಸಾಬೀತಾದರೆ ಎಲ್ಲ ನಿವಾಸಿಗಳಿಗೆ ಕನಿಷ್ಠ1 ವರ್ಷ ಹಾಗೂ ಗರಿಷ್ಠ 3 ವರ್ಷಗಳ ಕಾಲ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement