ಪಾಟ್ನಾ: ಆರ್ ಜೆಡಿ ವಿವಾದಿತ ನಾಯಕ ಶಹಾಬುದ್ದೀನ್ ಬಿಡುಗಡೆಗೆ ನ್ಯಾಯಾಲಯಾ ಜಾಮೀನು ನೀಡಿರುವುದರ ಸಂಬಂಧ ಪ್ರತಿಕ್ರಿಯಿಸಿರುವ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಕೋರ್ಟ್ ಆದೇಶವನ್ನು ಯಾರಿದಂಲೂ ಪ್ರಶ್ನಿಸಿಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕೊಲೆ ಪ್ರಕರಣದಲ್ಲಿ ಬಂಧನದಲ್ಲಿದ್ದ ಶಹಾಬುದ್ದೀನ್ ಗೆ ಜಾಮೀನು ನೀಡಿದೆ. ಕಳೆದ 11 ವರ್ಷಗಳಿಂದ ಆತ ಜೈಲಿನಲ್ಲಿದ್ದ, ಈಗ ಜಾಮೀನು ಸಿಕ್ಕಿದೆ. ಹೀಗಿರುವಾಗ ನ್ಯಾಯಾಲಯದ ಆದೇಶವನ್ನು ಯಾರಾದ್ರೂ ಪ್ರಸ್ನಿಸಲು ಸಾಧ್ಯವೇ ಎಂದು ಹೇಳಿದ್ದಾರೆ.
ಖಾಸಗಿ ಚಾನೆಲ್ ವೊಂದರ ಸಂದರ್ಶನದಲ್ಲಿ ಮಾತನಾಡಿದ ಲಾಲೂ ಶಹಾಬುದ್ದೀನ್ ಗೆ ಜಾಮೀನು ಸಿಕ್ಕಿರುವ ವಿಷಯವನ್ನ ಮಾಧ್ಯಮಗಳು ಅನಾವಷ್ಯಕವಾಗಿ ಚರ್ಚೆಗೆ ಎಳೆದು ತರುತ್ತಿವೆ ಎಂದು ಕಿಡಿ ಕಾರಿದರು.