ಎಂಬ್ರೇಯರ್ ವಿಮಾನ 
ದೇಶ

ಎಂಬ್ರೇಯರ್ ವಿಮಾನ ಖರೀದಿಯಲ್ಲಿ ಲಂಚ ಆರೋಪ; ತನಿಖೆ ಕುರಿತು ಪರಿಶೀಲನೆ ಎಂದ ಸಿಬಿಐ

ಬ್ರೆಜಿಲ್ ನ ಮೂರು ಎಂಬ್ರೇಯರ್ ವಿಮಾನಗಳನ್ನು ಖರೀದಿಸಲು 2008ರ ಯುಪಿಎ ಸರ್ಕಾರದ ಅವಧಿಯಲ್ಲಿ ಲಂಚ ...

ನವದೆಹಲಿ: ಬ್ರೆಜಿಲ್ ನ ಮೂರು ಎಂಬ್ರೇಯರ್ ವಿಮಾನಗಳನ್ನು ಖರೀದಿಸಲು 2008ರ ಯುಪಿಎ ಸರ್ಕಾರದ ಅವಧಿಯಲ್ಲಿ ಲಂಚ ನೀಡಲಾಗಿತ್ತು ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ಸಿಬಿಐಗೆ ವಿಸ್ತಾರವಾದ ತನಿಖೆ ನಡೆಯುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.
ವಿಮಾನದ ಒಪ್ಪಂದ ಕುರಿತು ಸಂಪೂರ್ಣ ದಾಖಲೆಗಳನ್ನು ಪರಿಶೀಲಿಸಿದ ನಂತರ ಉಲ್ಲೇಖಗಳನ್ನು ಬಳಸಿ ತನಿಖೆಗೆ ಮುಂದಾಗಲಾಗುವುದು ಎಂದು ಸಿಬಿಐ ಮೂಲಗಳು ತಿಳಿಸಿವೆ.
ಎಫ್ ಐಆರ್ ದಾಖಲಿಸಲು ಸಾಕಷ್ಟು ಪ್ರಮುಖ ಸಾಕ್ಷಿಗಳು ಇದೆ ಎಂದು ಗೊತ್ತಾದ ಮೇಲಷ್ಟೇ ತನಿಖೆ ಆರಂಭಿಸಲಾಗುವುದು, ಇಲ್ಲದಿದ್ದರೆ ದಾಖಲೆಗಳನ್ನೆಲ್ಲಾ ಸಂಗ್ರಹಿಸಿ ಕೇಸು ದಾಖಲಿಸಿಕೊಳ್ಳಲು ಪ್ರಾಥಮಿಕ ತನಿಖೆ ದಾಖಲಿಸಲಾಗುವುದು ಎಂದು ಸಿಬಿಐ ಹೇಳಿದೆ.
ಇದೊಂದು ಗಂಭೀರ ಆಪಾದನೆಯಾಗಿದ್ದು, ಸಿಬಿಐ ತನಿಖೆಗೆ ಆದೇಶಿಸಲಾಗುವುದು ಎಂದು ಸರ್ಕಾರ ಈಗಾಗಲೇ ತಿಳಿಸಿದೆ.
ಈ ಬಗ್ಗೆ ವಾರದ ಆರಂಭದಲ್ಲಿ ಹೇಳಿಕೆ ನೀಡಿದ್ದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಇದರಲ್ಲಿ ಅಪರಾಧ ಹಿನ್ನೆಲೆಯಿದ್ದರೆ ಸಚಿವಾಲಯಕ್ಕೆ ತನಿಖೆ ನಡೆಸಲು ಸಾಧ್ಯವಿಲ್ಲದ ಕಾರಣ ಸಿಬಿಐ ತನಿಖೆ ನಡೆಸಲಿದೆ. ಕಾರ್ಯವಿಧಾನ ಸಮಸ್ಯೆಗಳು ಮಾತ್ರ ಒಳಗೊಂಡಿದ್ದರೆ ರಕ್ಷಣಾ ಸಚಿವಾಲಯ ಮಧ್ಯಂತರ ತನಿಖೆ ನಡೆಸಲಿದೆ ಎಂದು ಹೇಳಿದ್ದರು.
ಸುಮಾರು 208 ದಶಲಕ್ಷ ಡಾಲರ್ ಮೊತ್ತದ ಒಪ್ಪಂದದಲ್ಲಿ ಬ್ರೆಝಿಲ್ ನ ಘಟಕ ಲಂಚ ಸ್ವೀಕರಿಸಿದೆ ಎಂಬ ಅಮೆರಿಕದ ಕಾನೂನು ಇಲಾಖೆ ಅಧಿಕಾರಿಗಳ ಆರೋಪದಂತೆ ಡಿಆರ್ ಡಿಒ (ಭಾರತ ರಕ್ಷಣಾ ಸಂಸ್ಥೆ)  ಪ್ರತ್ಯೇಕ ತನಿಖೆ ನಡೆಸುತ್ತಿದ್ದು ಅದಕ್ಕೆ ಪರ್ಯಾಯವಾಗಿ, ಅಗಸ್ಟಾವೆಸ್ಟ್ ಲಾಂಡ್ ಲಂಚ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ವಿಶೇಷ ತಂಡ ಈ ಪ್ರಕರಣವನ್ನೂ ತನಿಖೆ ನಡೆಸಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

ಮತ ಬೇಟೆ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ

ಕೋಟಿ ಕೋಟಿ ಲೂಟಿ: ಅರಣ್ಯ ಇಲಾಖೆ ಮಾಜಿ ಅಧಿಕಾರಿಗೆ ಕೋರ್ಟ್ ಶಾಕ್; ಬರೋಬ್ಬರಿ 1.38 ಕೋಟಿ ದಂಡ, 3 ವರ್ಷ ಜೈಲು ಶಿಕ್ಷೆ..!