ದೇಶ

ಪಾಕ್‌ಗೆ ತಿರುಗೇಟು: ಬಲೂಚಿ ಮುಖಂಡರಿಗೆ ಭಾರತದಲ್ಲಿ ರಾಜಾಶ್ರಯ?

Vishwanath S
ನವದೆಹಲಿ: ಕಾಶ್ಮೀರ ಪ್ರತ್ಯೇಕತವಾದಿಗಳಿಗೆ ಆಶ್ರಯ ನೀಡುವ ಮೂಲಕ ಭಾರತಕ್ಕೆ ತಲೆನೋವಾಗಿರುವ ಪಾಕಿಸ್ತಾನಕ್ಕೆ ಎದುರೇಟು ನೀಡಲು ಭಾರತ ಸಜ್ಜಾಗಿದೆ. 
ಪಾಕಿಸ್ತಾನದಿಂದ ಪ್ರತ್ಯೇಕತೆ ಬಯಸುತ್ತಿರುವ ಬಲೂಚಿಸ್ತಾನದ ಪ್ರತ್ಯೇಕತವಾದಿಗಳಿಗೆ ರಾಜಕೀಯ ಬೆಂಬಲ ನೀಡಲು ನರೇಂದ್ರ ಮೋದಿ ಸರ್ಕಾರ ನಿರ್ಧರಿಸಿದೆ. ಬಲೂಚಿಸ್ತಾನದ ಮುಖಂಡರಿಗೆ ಭಾರತದಲ್ಲಿ ರಾಜಕೀಯ ಆಶ್ರಯ ನೀಡಲು ಸರ್ಕಾರ ಬದ್ಧವಾಗಿದೆ ಎಂಬ ಮಾಹಿತಿ ಉನ್ನತ ಮೂಲಗಳಿಂದ ತಿಳಿದುಬಂದಿದೆ. 
ಬಲೂಚಿಸ್ತಾನದ ಪ್ರತ್ಯೇಕತವಾದಿ ಮುಖಂಡರು ಮನವಿ ಮಾಡಿಕೊಂಡರೆ ಕೆಲವೇ ವಾರಗಳಲ್ಲಿ ಅವರಿಗೆ ಕೇಂದ್ರ ಸರ್ಕಾರ ರಾಜಕೀಯ ಆಶ್ರಯ ಒದಗಿಸಲಿದೆಯಂತೆ. ಭಾರತದ ಈ ನಿರ್ಧಾರವನ್ನು ಬಲೂಚಿಸ್ತಾನದ ಪ್ರಮುಖ ನೇತಾರ ಬ್ರಹ್ಮಾಗಡ್ ಬುಗ್ತಿ ಅವರು ಸ್ವಾಗತಿಸಿದ್ದು ಇದೊಂದು ಐತಿಹಾಸಿಕ ಎಂದು ಬಣ್ಣಿಸಿದ್ದಾರೆ. 
ಬಹಳ ವರ್ಷದಿಂದ ಪಾಕಿಸ್ತಾನದಿಂದ ಬಲೂಚಿಸ್ತಾನವನ್ನು ಪ್ರತ್ಯೇಕಗೊಳಿಸುವ ಹೋರಾಟಗಳು ನಡೆಯುತ್ತಾ ಬಂದಿದ್ದರು. ಕಳೆದ ತಿಂಗಳ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಲೂಚಿಸ್ತಾನದ ವಿಚಾರ ಪ್ರಸ್ತಾಪ ಮಾಡಿದ ಮೇಲೆ ಬಲೂಚಿ ಹೋರಾಟಕ್ಕೆ ಅಂತಾರಾಷ್ಟ್ರೀಯ ಮನ್ನಣೆ ಸಿಕ್ಕಿದೆ. 
ಬಲೂಚಿ ಪ್ರತ್ಯೇಕತೆಗೆ ಹೋರಾಡುತ್ತಿರುವ ಮುಖಂಡರು ಸದ್ಯ ಪಾಕಿಸ್ತಾನ ಗಡೀಪಾರು ಮಾಡಿದ್ದು, ವಿದೇಶಗಳಲ್ಲಿ ನೆಲಸಿಕೊಂಡೇ ಅವರು ಹೋರಾಟವನ್ನು ಮುಂದುವರೆಸಿದ್ದಾರೆ. ಆದರೆ ವಿದೇಶಗಳಿಗೆ ಸಂಚಾರ ನಡೆಸಲು ಅವರಿಗೆ ಸರಿಯಾದ ಪಾಸ್ ಪೋರ್ಟ್ ಮತ್ತು ವೀಸಾ ಸಮಸ್ಯೆ ಇದ್ದು, ಭಾರತದಲ್ಲಿ ಅವರಿಗೆ ರಾಜಾಶ್ರಯ ಸಿಕ್ಕರೆ ಭಾರತೀಯ ಪಾಸ್ ಪೋರ್ಟ್ ಕೂಡ ದೊರಕಲಿದೆ. 
SCROLL FOR NEXT