ರಾಹುಲ್ ಗಾಂಧಿ 
ದೇಶ

ಇಂಡಿಗೋ ವಿಮಾನದ ಪೈಲಟ್ ಪರವಾನಗಿ, ಇಂಧನ ಪರಿಶೀಲನೆಗೆ ಬೇಡಿಕೆ ಇಟ್ಟಿದ್ದ ರಾಹುಲ್ ಗಾಂಧಿ ಭದ್ರತಾ ಪಡೆ

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಭದ್ರತೆ ಒದಗಿಸುವ ವಿಶೇಷ ಭದ್ರತಾ ಪಡೆ ಇಂಡಿಗೋ ವಿಮಾನದ ಪೈಲಟ್ ಗಳ ಪರವಾನಗಿಯನ್ನು ಪರಿಶೀಲನೆ ನಡೆಸಲು ಮುಂದಾಗಿದ್ದ ಬಗ್ಗೆ ಮಾಹಿತಿ ಬಹಿರಂಗವಾಗಿದೆ

ನವದೆಹಲಿ: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಭದ್ರತೆ ಒದಗಿಸುವ ವಿಶೇಷ ಭದ್ರತಾ ಪಡೆ ಇಂಡಿಗೋ ವಿಮಾನದ ಪೈಲಟ್ ಗಳ ಪರವಾನಗಿಯನ್ನು ಹಾಗೂ ವಿಮಾನಕ್ಕೆ ಬಳಸಲಾಗುವ ಇಂಧನದ ಮಾದರಿಯನ್ನು ಪರಿಶೀಲನೆ ನಡೆಸಲು ಮುಂದಾಗಿದ್ದ ಮಾಹಿತಿ ಬಹಿರಂಗವಾಗಿದೆ.

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಸೆ.14 ರಂದು ರಾಹುಲ್ ಗಾಂಧಿ ವಾರಾಣಸಿಗೆ ಇಂಡಿಗೋ ವಿಮಾನದಲ್ಲಿ ತೆರಳಿದ್ದರು. ಈ ವೇಳೆ ರಾಹುಲ್ ಗಾಂಧಿ ಅವರ ಭದ್ರತಾ ಸಿಬ್ಬಂದಿಗಳು  ಇಂಡಿಗೋ ವಿಮಾನದ ಪೈಲಟ್ ಗಳ ಪರವಾನಗಿಯನ್ನು ಹಾಗೂ ವಿಮಾನಕ್ಕೆ ಬಳಸಲಾಗುವ ಇಂಧನದ ಮಾದರಿಯನ್ನು ಪರಿಶೀಲನೆ ನಡೆಸಲು ಮುಂದಾಗಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ.

ವಿಶೇಷ ಭದ್ರತಾ ಪಡೆ (ಎಸ್ ಪಿಜಿ)ಯ ಬೇಡಿಕೆಯನ್ನು ನಿರಾಕರಿಸಿದ್ದ ಪೈಲಟ್ ಗಳು, ಎಸ್ ಪಿಜಿ ಗಳಿಗೆ ಪೈಲಟ್ ಗಳ ಪರವಾನಗಿ ಕೇಳುವ ಅಧಿಕಾರವಿಲ್ಲವಾದ್ದರಿಂದ ವಿಮಾನಯಾನ ಸಂಸ್ಥೆ ಮೂಲಕವೇ ಪರವಾನಗಿಯನ್ನು ಪರಿಶೀಲಿಸಿಕೊಳ್ಳುವಂತೆ ಹೇಳಿದ್ದಾರೆ. ಆದರೆ ಇಂಧನದ ಮಾದರಿಯನ್ನು ಪರಿಶೀಲಿಸಲು ವಿಶೇಷ ಭದ್ರತಾ ಪಡೆ ಸಿಬ್ಬಂದಿಗಳಿಗೆ ಅವಕಾಶ ನೀಡಲಾಗಿದೆ.
ವಿಮಾನಕ್ಕೆ ಬಳಕೆ ಮಾಡುವ ಇಂಧನದ ಮಾದರಿಯನ್ನು ಪರಿಶೀಲಿಸಿದ ಹಿನ್ನೆಲೆಯಲ್ಲಿ ಇಂಡಿಗೋ ವಿಮಾನ 45 ನಿಮಿಷಗಳು ತಡವಾಗಿ ಟೇಕ್ ಆಫ್ ಆಗಿದೆ ಎಂದು ತಿಳಿದುಬಂದಿದೆ. ಬಹುಶಃ ಹಿಂದೆಂದೂ ಸಹ ವಿಶೇಷ ಭದ್ರತಾ ಸಿಬ್ಬಂದಿಗಳು  ಪೈಲಟ್ ಗಳ ಪರವಾನಗಿ ಪರಿಶೀಲನೆ ನಡೆಸಲು ಕೇಳಿದ ಉದಾಹರಣೆಗಳಿಲ್ಲ. ವಿಐಪಿ ಗಳಿಗಾಗಿ ಏರ್ ಇಂಡಿಯಾ ಅತ್ಯುತ್ತಮ ಪೈಲಟ್ ಗಳನ್ನೇ ನಿಯೋಜಿಸುವುದು ಶಿಷ್ಟಾಚಾರವಾಗಿದೆ. ಆದರೆ ಐಐಪಿಗಳು ವಾಣಿಜ್ಯ ವಿಮಾನಗಳನ್ನು ಬಳಸಿದಾಗ ಪೈಲಟ್ ಗಳ ಪರವಾನಗಿ ಪರಿಶೀಲನೆ ನಡೆಸಿದ ಉದಾಹರಣೆಗಳಿಲ್ಲ ಎಂದು ಇಂಡಿಗೋ ವಿಮಾನ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ. ರಾಹುಲ್ ಗಾಂಧಿಯ ಎಸ್ ಪಿಜಿ ತಂಡ ಪೈಲಟ್ ಗಳ ಪರವಾನಗಿ ಪರಿಶೀಲನೆ ನಡೆಸಲು ಮುಂದಾಗಿದ್ದ ಘಟನೆ ಅಚ್ಚರಿ ಮೂಡಿಸಿದೆ ಎಂದು ವಿಮಾನಯಾನ ಅಧಿಕಾರಿಗಳು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಬಹು ಅಂಗಾಂಗ ವೈಫಲ್ಯದಿಂದ ಗಾಯಕಿ ಆಶಾ ಭೋಸ್ಲೆ ನಿಧನ': ಬ್ರೀಚ್ ಕ್ಯಾಂಡಿ ಆಸ್ಪತ್ರೆ ಸ್ಪಷ್ಟನೆ

US-Iran ಶಾಂತಿ ಒಪ್ಪಂದ ವಿಫಲ: ಪಾಕಿಸ್ತಾನ ಕುತಂತ್ರ; ಸೌದಿಗೆ 13,000 Pak ಸೈನಿಕರು, 18 ಯುದ್ಧ ವಿಮಾನ ರವಾನೆ!

ಇರಾನ್-ಅಮೆರಿಕ ಯುದ್ಧ ಮುಂದುವರೆದರೆ ಟ್ರಂಪ್ ಅಧ್ಯಕ್ಷ ಸ್ಥಾನಕ್ಕೇ ಕುತ್ತು!

40 ಲಕ್ಷ ರೂ ಸಂಬಳ, ದಿಢೀರ್ ಕೆಲಸದಿಂದ ವಜಾ; 1.4 ಕೋಟಿ ಮೌಲ್ಯದ ಮನೆ EMI ತೀರಿಸಲು Rapido ಚಾಲಕನಾದ ಟೆಕ್ಕಿ!

ಇರಾನ್ ಜೊತೆಗಿನ 21 ಗಂಟೆಗಳ ಶಾಂತಿ ಮಾತುಕತೆ; ಡೊನಾಲ್ಡ್ ಟ್ರಂಪ್‌ಗೆ 'ಡಜನ್‌ಗಟ್ಟಲೆ' ಬಾರಿ ಫೋನ್ ಕರೆ ಮಾಡಿದ ಜೆಡಿ ವ್ಯಾನ್ಸ್!

SCROLL FOR NEXT