ಗಾಂಧಿನಗರ: 2017 ಕ್ಕೆ ಗುಜರಾತ್ ನ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು ಕಾಂಗ್ರೆಸ್ ನ ಗೌಪ್ಯ ಸಮೀಕ್ಷೆ ಪ್ರಕಾರ ಬಿಜೆಪಿಗೆ ಮತ್ತೆ ಬಹುಮತ ಸಿಗಲಿದೆಯಂತೆ.
ಕಾಂಗ್ರೆಸ್ ನ ಗೌಪ್ಯ ಸಮೀಕ್ಷೆಯ ವರದಿಯನ್ನು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಕಳಿಸಿಕೊಟ್ಟಿದ್ದು, ವರದಿಯಲ್ಲಿ 182 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿಗೆ 97 ಸ್ಥಾನಗಳು ಕಾಂಗ್ರೆಸ್ ಗೆ ಗರಿಷ್ಠ 85 ಸ್ಥಾನಗಳು ಸಿಗುವ ಸಾಧ್ಯತೆ ಇದೆ ಎಂದು ಹೇಳಿದೆ.
ವೃತ್ತಿಪರ ಏಜೆನ್ಸಿ ಗಳ ಮೂಲಕ ಸಮೀಕ್ಷೆ ನಡೆಸಲಾಗಿದ್ದು ಬಿಜೆಪಿಗೆ 52 ಸ್ಥಾನಗಳು( ನಗರ ಪ್ರದೇಶ) ಸಿಗುವುದು ಶೇ.100 ರಷ್ಟು ಖಚಿತ, ಇನ್ನು ಉಳಿದ 45 ಸ್ಥಾನಗಳು( ಗ್ರಾಮೀಣ ಪ್ರದೇಶ) ಸಿಗುವ ಸಾಧ್ಯತೆ ಶೇ.85 ರಷ್ಟಿದೆ ಎಂದು ಕಾಂಗ್ರೆಸ್ ಹೇಳಿದೆ. ಒಟ್ಟಾರೆ ಕಾಂಗ್ರೆಸ್ ನ ಸಮೀಕ್ಷೆಯ ಪ್ರಕಾರ ಬಿಜೆಪಿಗೆ 182 ವಿಧಾನಸಭಾ ಕ್ಷೇತ್ರಗಳ ಪೈಕಿ 97 ಸ್ಥಾನಗಳು ಸಿಗಲಿವೆ. ಕಾಂಗ್ರೆಸ್ ಪಕ್ಷ ಈಗಿರುವ 85 ಸ್ಥಾನಗಳನ್ನು ಉಳಿಸಿಕೊಳ್ಳಲಿದೆ. ಆದರೆ ಇದರಿಂದ ಸರ್ಕಾರ ರಚನೆ ಅಸಾಧ್ಯ ಎಂದು ಕಾಂಗ್ರೆಸ್ ನಡೆಸಿರುವ ಗೌಪ್ಯ ಸಮೀಕ್ಷೆಯ ವರದಿ ತಿಳಿಸಿದೆ.