ದೇಶ

ಮೋದಿ ಬರೀ ಸೆಲ್ಫೀ ಮತ್ತು ಭರವಸೆ ಕೊಡುವ ಯಂತ್ರ: ರಾಹುಲ್ ಗಾಂಧಿ

Vishwanath S

ಒರಯ್(ಉತ್ತರಪ್ರದೇಶ): ಪ್ರಧಾನಿ ನರೇಂದ್ರ ಮೋದಿ ಅವರು ಬರೀ ಸೆಲ್ಫೀ ಮತ್ತು ಭರವಸೆ ನೀಡುವ ಯಂತ್ರ. ಅಚ್ಛೇ ದಿನ ಭರವಸೆ ಬಡವರಿಗಲ್ಲ, ಮೋದಿ ಅವರ ಕೈಗಾರಿಕೋದ್ಯಮಿ ಸ್ನೇಹಿತರಿಗೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ.

ಉತ್ತರಪ್ರದೇಶದಲ್ಲಿ ಚುನಾವಣಾ ರ್ಯಾಲಿ ಡಿಯೋರಿಯದಿಂದ ದಿಲ್ಲಿ ಕಿಸಾನ್ ಯಾತ್ರೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಅವರು ಹಲವಾರು ಭರವಸೆಗಳನ್ನು ನೀಡಿದ್ದರು. ಈ ಪೈಕಿ ಸ್ವಿಸ್ ಬ್ಯಾಂಕಿನಲ್ಲಿರುವ ಹಣವನ್ನು ಭಾರತಕ್ಕೆ ವಾಪಸ್ ತಂದು ಪ್ರತಿಯೊಬ್ಬ ಭಾರತೀಯನ ಖಾತೆಗೆ 15 ಲಕ್ಷ ಜಮಾ ಮಾಡುವುದು. ರೈತರಿಗೆ ನ್ಯಾಯಬೆಲೆ, 2 ಕೋಟಿ ಉದ್ಯೋಗ ಸೃಷ್ಠಿ ಹೀಗೆ ಹಲವಾರು ಭರವಸೆಗಳನ್ನು ಚುನಾವಣೆ ಪೂರ್ವ ಹಾಗೂ ಪ್ರಧಾನಿಯಾದ ಬಳಿಕ ನೀಡಿದ್ದು ಅವುಗಳನ್ನು ಪೂರೈಸಲು ಆಗಿಲ್ಲ ಎಂದು ಆರೋಪಿಸಿದ್ದಾರೆ.

ಮೋದಿ ಅವರು ಕೋಮುಗಲಭೆಗಳಿಲ್ಲ ರಾಜ್ಯಗಳಲ್ಲಿ ಕೋಮುವಾದವನ್ನು ಹರಡುತ್ತಿದ್ದಾರೆ. ಹಿಂದು, ಮುಸ್ಲಿಂ, ಸಿಖ್ ಮತ್ತು ಕ್ರಿಶ್ಚಿಯನ್ ರಿರುವ ಶಾಂತಿಯುತ ದೇಶದಲ್ಲಿ ಕೋಮುವಾದವನ್ನು ಸೃಷ್ಠಿಸುವುದು ಮೋದಿ ಅವರ ಗುರಿಯಾಗಿದೆ ಎಂದು ರಾಹುಲ್ ಆರೋಪಿಸಿದ್ದಾರೆ.

ಈ ಯಾತ್ರೆ ಮಾಡುತ್ತಿರುವ ಸಂದರ್ಭದಲ್ಲಿ ಮಂದಿರ-ಮಸೀದಿಗಳು ಎದುರು ಬದುರಿದ್ದು, ಇಲ್ಲಿ ಜನರು ಒಟ್ಟಾಗಿ ಬಾಳುತ್ತಿದ್ದಾರೆ. ಆದರೆ ಮೋದಿ ಬಂದ ಬಳಿಕ ಹಿಂದೂಗಳು ಮುಸ್ಲಿಂರೊಟ್ಟಿಗೆ ಜಗಳ ಮಾಡುವಂತಾಗಿದೆ ಎಂದರು. ಇನ್ನು ಹರಿಯಾಣದಲ್ಲಿ ಕಾಂಗ್ರೆಸ್ ಸರ್ಕಾರ 10 ವರ್ಷಗಳ ಕಾಲ ಅಧಿಕಾರ ನಡೆಸಿತ್ತು. ಈ ವೇಳೆ ಜಾಟ್ ಹಾಗೂ ಜಾಟ್ ಅಲ್ಲದ ಸಮುದಾಯದವರಲ್ಲಿ ಯಾವುದೇ ಗಲಭೆಗಳು ಇರಲಿಲ್ಲ. ಆದರೆ ಇದೀಗ ಹರಿಯಾಣ ಗಲಭೆ ಪೀಡಿತವಾಗಿದೆ ಎಂದರು.

ಭಾರತಕ್ಕೆ ಅಚ್ಛೇ ದಿನ್ ಬಂದಿದೆ ಆದರೆ ಅದು ಪ್ರಧಾನಿ ನರೇಂದ್ರ ಮೋದಿ ಅವರು 12 ರಿಂದ 15 ಕೈಗಾರಿಕೋಧ್ಯಮ ಸ್ನೇಹಿತರಿಗೆ ಮಾತ್ರ. ಆದರೆ ಬಡವರು ಮತ್ತು ದುರ್ಬಲರು ಗಲಭೆಗಳಿಂದ ನಲುಗುತ್ತಿದ್ದಾರೆ ಎಂದು ರಾಹುಲ್ ಮೋದಿ ವಿರುದ್ಧ ಗುಡುಗಿದ್ದಾರೆ.

SCROLL FOR NEXT