ದೇಶ

ಜಡ್ಜ್ ಗಳ ನಡುವೆ ಭಿನ್ನಾಭಿಪ್ರಾಯ: ಸ್ವಾತಿ ಕೊಲೆ ಆರೋಪಿ ರಾಮ್ ಕುಮಾರ್ ಮರಣೋತ್ತರ ಪರೀಕ್ಷೆ ಮತ್ತೆ ಮುಂದೂಡಿಕೆ

Shilpa D

ಚೆನ್ನೈ: ಜೈಲಿನಲ್ಲಿ ಆತ್ಮಹತ್ಯೆಗೆ ಶರಣಾದ ಸಾಫ್ಟ್ ವೇರ್ ಎಂಜಿನೀರ್ ಸ್ವಾತಿ ಕೊಲೆ ಪ್ರಕರಣದ ಆರೋಪಿ ರಾಮ್ ಕುಮಾರ್ ಮರಣೋತ್ತರ ಪರೀಕ್ಷೆ ನ್ಯಾಯಾಧೀಶರ ನಡುವಿನ ಭಿನ್ನಾಭಿಪ್ರಾಯದಿಂದ ಮಂದೂಡಲಾಗಿದೆ.

ಮತ ಆರೋಪಿ ರಾಮ್ ಕುಮಾರ್ ತಂದೆ ಸಲ್ಲಿಸಿದ್ದ ಮನವಿ ಹಿನ್ನೆಲೆಯಲ್ಲಿ ಇಬ್ಬರು ನ್ಯಾಯಾಧೀಶರ ನಡುವಿನ ಭಿನ್ನಾಭಿಪ್ರಾಯದಿಂದ 2ನೇ ದಿನವೂ ಮರಣೋತ್ತರ ಪರೀತ್ರೆ ಮುಂದೂಡಲಾಗಿದೆ.

ಖಾಸಗಿ ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಬೇಕು ಎಂದು ರಾಮ್ ಕುಮಾರ್ ತಂದೆ ಪರಮಶಿವಂ ಮನವಿ ಸಲ್ಲಿಸಿದ್ದರು.ಹೀಗಾಗಿ ಹಿರಿಯ ನ್ಯಾಯಮೂರ್ತಿ ಹುಲುವಾಡಿ ಎಸ್. ರಮೇಶ್ ರಾಮ್ ಕುಮಾರ್ ತಂದೆಯ ಮನವಿಯಂತೆ ಖಾಸಗಿ ವೈದ್ಯರಿಂದ ಮರಣೋತ್ತರ ಪರೀಕ್ಷೆ ಮಾಡಿಸಲು ಹೇಳಿದ್ದರು, ಆದರೆ ವಿಭಾಗೀಯ ಪೀಠದ ಮತ್ತೊಬ್ಬ ನ್ಯಾಯಾಧೀಶರಾದ ವೈದ್ಯ.ನಾಥನ್ ಸರ್ಕಾರಿ ವೈದ್ಯರಿಂದಲೇ ಮರಣೋತ್ತರ ಪರೀಕ್ಷೆ ನಡೆಸಲು ಆದೇಶಿದ್ದರು.    

ಹೀಗಾಗಿ ವಿಷಯ ಮುಖ್ಯ ನ್ಯಾಯಮೂರ್ತಿ ಎಸ್ ಕೆಎ ಕೌಲ್ ಅಂಗಳ ತಲುಪಿದ್ದು, ಮತ್ತೊಬ್ಬ ನ್ಯಾಯಮೂರ್ತಿಗಳ ಸಲಹೆ ಪಡೆದು,ಯಾವುದಕ್ಕೆ ಹೆಚ್ಚಿನ ಬೆಂಬಲ ಸೂಚಿಸುತ್ತಾರೋ ಅದರಂತೆ ಮರಣೋತ್ತರ ಪರೀಕ್ಷೆ ನಡೆಸಲು ಸೂಚಿಸಿದ್ದಾರೆ. ಹೀಗಾಗಿ ನ್ಯಾಯಮೂರ್ತಿಗಳು ಒಮ್ಮತದಿಂದ ಒಪ್ಪುವವರೆಗೂ ರಾಮ್ ಕುಮಾರ್ ಮರಣೋತ್ತರ ಪರೀಕ್ಷೆ ನಡೆಸದಿರಲು ಆದೇಶಿಸಲಾಗಿದೆ.

SCROLL FOR NEXT