ಚೆನ್ನೈ: ಅತ್ಯಾಧುನಿಕ ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್ ಚೆನ್ನೈ ಮೂಲದ ಇಂಡಿಗೋ ವಿಮಾನದಲ್ಲಿ ಸ್ಫೋಟಗೊಂಡು ಪ್ರಯಾಣಿರಲ್ಲಿ ಆತಂಕ, ಭಯ ಹುಟ್ಟಿಸಿತು. ಆದರೂ ವಿಮಾನ ಸುರಕ್ಷಿಕತವಾಗಿ ಇಳಿದಿದ್ದು ಪ್ರಯಾಣಿಕರಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ.
ಈ ಘಟನೆಯಿಂದಾಗಿ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 2 ಸರಣಿಯ ಮೊಬೈಲ್ ಸೆಟ್ ನ್ನು ವಿಮಾನದೊಳಗೆ ಬಳಸದಂತೆ ನಾಗರಿಕ ವಿಮಾನಯಾನದ ಮಹಾ ನಿರ್ದೇಶಕರು ಸೂಚನೆ ಆದೇಶ ಹೊರಡಿಸಿದ್ದಾರೆ. ಸ್ಯಾಮ್ ಸಂಗ್ ಕಂಪೆನಿಯ ಅಧಿಕಾರಿಗಳನ್ನು ವಿಮಾನಯಾನ ಪ್ರಾಧಿಕಾರ ಕರೆಸಿದೆ.
ಸಿಂಗಾಪೂರದಿಂದ ಚೆನ್ನೈ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿ ಈ ಘಟನೆ ಸಂಭವಿಸಿದೆ. 6ಇ-054 ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಇಂದು ಬೆಳಗ್ಗೆ ಕ್ಯಾಬಿನ್ ನಿಂದ ಹೊಗೆಯ ವಾಸನೆ ಬರುತ್ತಿದ್ದುದನ್ನು ಗಮನಿಸಿದರು. ವಿಮಾನದಲ್ಲಿದ್ದ ಕ್ಯಾಬಿನ್ ಸಿಬ್ಬಂದಿಗೆ ತಕ್ಷಣವೇ ತಿಳಿಸಿದರು. ಸಿಬ್ಬಂದಿ ತಪಾಸಣೆ ನಡೆಸಿದಾಗ 23ಸಿ ಸೀಟಿನಿಂದ ಹೊಗೆ ಬರುತ್ತಿದ್ದು, ಕೂಡಲೇ ಪೈಲಟ್ ಏರ್ ಟ್ರಾಫಿಕ್ ಕಂಟ್ರೋಲ್ ಗೆ ತಿಳಿಸಿದರು.
ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನದ ಬೇರೆ ಸೀಟುಗಳಿಗೆ ಪ್ರಯಾಣಿಕರನ್ನು ಕಳುಹಿಸಲಾಯಿತು. ತಪಾಸಣೆ ಮಾಡಿದಾಗ ಪ್ರಯಾಣಿಕರೊಬ್ಬರ ಬ್ಯಾಗ್ ನಲ್ಲಿದ್ದ ಸ್ಯಾಮ್ ಸಂಗ್ 2 ಮೊಬೈಲ್ ಸೆಟ್ ಒಡೆದು ಬರುತ್ತಿರುವ ಹೊಗೆ ಎಂದು ಗೊತ್ತಾಗಿದೆ.
ವಿಮಾನದಲ್ಲಿ ಸ್ಯಾಮ್ ಸಂಗ್ ಮೊಬೈಲ್ ಹೊತ್ತಿ ಉರಿಯುತ್ತಿರುವುದು ಇದೇ ಮೊದಲ ಪ್ರಕರಣ. ಈ ಬಗ್ಗೆ ಸ್ಯಾಮ್ ಸಂಗ್ ಕಂಪೆನಿ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.