ವಿದ್ಯಾರ್ಥಿಗಳಿಂದ ಹತ್ಯೆಗೀಡಾದ ಶಿಕ್ಷಕ ಮುಕೇಶ್ ಕುಮಾರ್ 
ದೇಶ

ಪರೀಕ್ಷೆ ಬರೆಯಲು ಅವಕಾಶ ನೀಡದ ಶಿಕ್ಷಕನನ್ನೇ ಕೊಂದ ವಿದ್ಯಾರ್ಥಿಗಳು

ಆಘಾತಕಾರಿ ಘಟನೆಯೊಂದರಲ್ಲಿ ದೆಹಲಿಯ ಸುಲ್ತಾನ್ ಪುರಿ ಸರ್ಕಾರಿ ಶಾಲೆಯ 12ನೇ ತರಗತಿಯ ಇಬ್ಬರು...

ನವದೆಹಲಿ: ಆಘಾತಕಾರಿ ಘಟನೆಯೊಂದರಲ್ಲಿ ದೆಹಲಿಯ ಸುಲ್ತಾನ್ ಪುರಿ ಸರ್ಕಾರಿ ಶಾಲೆಯ 12ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳ ಎದುರೇ ಶಿಕ್ಷಕನನ್ನು ಭೀಕರವಾಗಿ ಇರಿದು ಕೊಂದು ಹಾಕಿದ್ದಾರೆ. ಸಾಕಷ್ಟು ಹಾಜರಾತಿಯಿರಲಿಲ್ಲ ಎಂಬ ಕಾರಣಕ್ಕೆ ಪರೀಕ್ಷೆ ಬರೆಯಲು ಅವಕಾಶ ನೀಡದ್ದಕ್ಕಾಗಿ ಸಿಟ್ಟಿನಿಂದ ಈ ಕೃತ್ಯವೆಸಗಿದ್ದಾರೆ.
ಹಿಂದಿ ಶಿಕ್ಷಕ ಮುಕೇಶ್ ಕುಮಾರ್ ಗೆ ಈ ಇಬ್ಬರು ವಿದ್ಯಾರ್ಥಿಗಳು ಪರೀಕ್ಷೆ ಮುಗಿದ ನಂತರ ಶಾಲಾ ಕೊಠಡಿಯಲ್ಲಿ ಚೂರಿಯಿಂದ ತಿವಿದು ಹಾಕಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಕುಮಾರ್ ಅವರನ್ನು ಆಸ್ಪತ್ರೆಗೆ ದಾಖಲಾಯಿಸಿತಾದರೂ ಬದುಕುಳಿಯಲಿಲ್ಲ.
ದೆಹಲಿಯ ಎಸ್ ಪಿ ರಸ್ತೆಯಲ್ಲಿರುವ ಸುಲ್ತಾನ್ ಪುರಿಯಲ್ಲಿ ಸಂಜೆ 5.30ರ ವೇಳೆಗೆ ಈ ಘಟನೆ ನಡೆದಿದೆ.  ತರಗತಿಯಲ್ಲಿ ಪರೀಕ್ಷೆ ನಡೆಯುತ್ತಿದ್ದಾಗ ಇಬ್ಬರು ವಿದ್ಯಾರ್ಥಿಗಳು ಅವರ ಮೇಲೆ ಚೂರಿಯಿಂದ ದಾಳಿ ಮಾಡಿದ್ದಾರೆ. ಕುಸಿದು ಬಿದ್ದ ಮುಕೇಶ್ ಅವರನ್ನು ಶಾಲಾ ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ನೀಡುವ ಮುನ್ನ ಹಣ ಮುಂಗಡ ಪಾವತಿಸಿ ಎಂದು ಆಸ್ಪತ್ರೆಯಲ್ಲಿ ಕೇಳಿದ್ದಾರೆ. ಹಲ್ಲೆ ನಡೆಸಿದ ಇಬ್ಬರು ವಿದ್ಯಾರ್ಥಿಗಳ ಹಾಜರಾತಿ ತೀರಾ ಕಡಿಮೆಯಿದ್ದುದರಿಂದ ಅವರನ್ನು ಪರೀಕ್ಷೆ ಬರೆಯಲು ಮುಕೇಶ್ ಬಿಟ್ಟಿರಲಿಲ್ಲ ಎಂದು ಸುಮಿತ್ ಎಂಬ ಮತ್ತೊಬ್ಬ ಶಾಲಾ ಸಿಬ್ಬಂದಿ ಹೇಳುತ್ತಾರೆ.
ಈಗಾಗಲೇ ಮೂರು ಬಾರಿ ಫೈಲ್ ಆಗಿದ್ದ ಆ ಇಬ್ಬರು ವಿದ್ಯಾರ್ಥಿಗಳು ಕ್ರಿಮಿನಲ್ ಗಳ ರೀತಿ ಇದ್ದರು. ಮೊದಲು ಅವರ ಹೆಸರನ್ನು ಪರೀಕ್ಷೆ ಬರೆಯುವವರ ಪಟ್ಟಿಯಿಂದ ತೆಗೆದು ಹಾಕಲಾಗಿತ್ತು. ಆದರೆ ನಂತರ ಪೋಷಕರು ಮತ್ತು ಪ್ರಾಂಶುಪಾಲರ ಒತ್ತಡದಿಂದ ಸೇರಿಸಲಾಯಿತು ಎನ್ನುತ್ತಾರೆ ಶಾಲೆಯ ಮತ್ತೊಬ್ಬ ಸಿಬ್ಬಂದಿ ಗುಲಾಬ್ ಶರ್ಮಾ.
ಈ ಹಿಂದೆ ಕೂಡ ಶಿಕ್ಷಕ ಮುಕೇಶ್ ಅವರಿಗೆ ಇಬ್ಬರು ವಿದ್ಯಾರ್ಥಿಗಳು ಬೆದರಿಕೆಯೊಡ್ಡಿದ್ದರಂತೆ. ಮೊನ್ನೆ ಪರೀಕ್ಷೆ ಮುಗಿದ ಬಳಿಕ ತರಗತಿಯಿಂದ ಹೊರಗೆ ಬರುತ್ತಿರುವಾಗ ಚೂರಿಯಿಂದ ತಿವಿದಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಕೂಡ ವಿಳಂಬ ಮಾಡಲಾಯಿತು ಎಂದು ಆರೋಪಿಸುತ್ತಾರೆ ಶರ್ಮಾ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

'ಭಾರತೀಯನ ಮದುವೆಯಾದಾಕ್ಷಣ Indian ಆಗಲ್ಲ, ಬಾಂಗ್ಲಾದೇಶಿ ಪತ್ನಿಗೆ ಭಾರತ ಪ್ರವೇಶ ನಿರಾಕರಣೆ ಸರಿ ಇದೆ': ಹೈಕೋರ್ಟ್

CM ಡಿ.ಕೆ. ಶಿವಕುಮಾರ್‌ಗಾಗಿ IndiGo flight ಲೇಟ್? VVIP ಸಂಸ್ಕೃತಿ ವಿರುದ್ಧ ಪ್ರಯಾಣಿಕರ ಆಕ್ರೋಶ..!

ಬರಗಾಲದ ಬೆನ್ನಲ್ಲೇ ಬೆಲೆ ಏರಿಕೆ ಬರೆ: ಮಧ್ಯಮ ವರ್ಗದವರಿಗೆ ಆರ್ಥಿಕ ಹೊಡೆತ, ಅಕ್ಕಿ ದರ ಗಗನಕ್ಕೆ..!