ಕೋಜಿಕೋಡ್: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಕೋಜಿಕೋಡ್ ನ ಈಸ್ಟ್ ಹಿಲ್ ಗೆಸ್ಟ್ ಹೌಸ್ ನಲ್ಲಿ ಉಳಿದು ಕೊಂಡಿದ್ದರು. ಸಭೆ ಮುಗಿದು ಮೋದಿ ತೆರಳಿ ಮೂು ದಿನ ಕಳೆದಿದೆ. ಆದರೆ ಮೋದಿ ತಂಗಿದ್ದ ಕೊಠಡಿ ಈಗ ಸಾರ್ವಜನಿಕರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
ಮೋದಿ ತಂಗಿದ್ದ ಗೆಸ್ಟ್ ಹೌಸ್ ನ ಕೊಠಡಿಯನ್ನು ಜನ ಕುತೂಹಲ ಭರಿತರಾಗಿ ನೋಡುತ್ತಿದ್ದಾರೆ. ಮೋದಿ ಅದ್ದ ಗೆಸ್ಟ್ ಹೌಸ್ ನ ಮ್ಯಾನೇಜರ್ ಸಿ ವಿ ಜಯರಾಜನ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಪ್ರಧಾನಿ ಮೋದಿ ತಂಗಿದ್ದ ಕೊಠಡಿಯ ಬಗ್ಗೆ ವಿವರ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ತಂಗಿದ್ದ ಕೊಠಡಿಯಲ್ಲಿ, ದಿವಂಗತ ಪ್ರಧಾನಿ ಇಂದಿರಾ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ, ಡಾ. ಮನಮೋಹನ್ ಸಿಂಗ್, ದಿವಂಗತ ರಾಷ್ಟ್ರಪತಿ ಅಬ್ದುಲ್ ಕಲಾಂ,ಪ್ರತಿಭಾ ಪಾಟೀಲ್ ಹಾಗೂ ಹಮೀದ್ ಅನ್ಸಾರಿ ಇದೇ ಕೊಠಡಿಯಲ್ಲಿ ಬೀಡು ಬಿಟ್ಟಿದ್ದರು ಎಂದು ಹೇಳಿದ್ದಾರೆ.
ಸೆಪ್ಟಂರಬ್ 19 ರಂದು ಪ್ರಧಾನ ಮಂತ್ರಿಗಳ ಮುಖ್ಯ ಭದ್ರತಾ ಅಧಿಕಾರಿಗಳ ಕಚೇರಿಯಿಂದ ಕರೆ ಬಂದಿತ್ತು. ಸೋಮವಾರ ಎಲ್ಲಾ ಭದ್ರತಾ ಕಾರ್ಯಗಳನ್ನು ಕೈಗೊಳ್ಳಲಾಗಿತ್ತು. ಇಡಿ ಪ್ರದೇಶವೆಲ್ಲಾ ಭದ್ರತಾ ಸಿಬ್ಬಂದಿಯಿಂದ ಆವರಿಸಿತ್ತು ಎಂದು ಅವರು ವಿವರ ನೀಡಿದರು.
ಪ್ರಧಾನಿ ಮೋದಿ ಅವರಿಗಾಗಿ ಕೊಠಡಿಯನ್ನು ವಿಶೇಷವಾಗಿ ಸಜ್ಜುಗೊಳಿಸಲಾಗಿತ್ತು. 72 ಇಂಚು ಉದ್ದದ ಟಿವಿ, ವ್ಯಾಯಾಮ ಸಾಧನ, ಯೋಗ ಮಾಡುವಾಗ ಸಂಗೀತ ಕೇಳಲು ಹೋಂ ಥಿಯೇಟರ್ ಗಳನ್ನು ಅಳವಡಿಸಲಾಗಿತ್ತು.
ಸೆಪ್ಟಂಬರ್ 24 ರಂದು ಸಂಜೆ 7 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ 35 ಮಂದಿ ಅತಿಥಿಗೃಹಕ್ಕೆ ಆಗಮಿಸಿದರು,.ಕೊಠಡಿಯಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದ ಬಳಿಕ ಇಬ್ಬರು ರಾಯಭಾರಿಗಳೊಂದಿಗೆ ಚರ್ಚೆ ನಡೆಸಿದರು ಎಂದು ಮ್ಯಾನೇಜರ್ ತಿಳಿಸಿದರು.
ಈ ವಯಸ್ಸಿನಲ್ಲೂ ಯೋಗ ಮಾಡುವುದು ಮೋದಿ ಅವರ ದೈನಂದಿನ ಜೀವನದ ಒಂದು ಅಂಗವಾಗಿದೆ, ಒಂದು ಗಂಟೆಯ ಯೋಗದ ನಂತರ ವ್ಯಾಯಮ ಮಾಡಲು ಸೈಕಲ್ ಬಳಸುತ್ತಾರೆ ಎಂದು ಹೇಳಿದರು.