ಕಾಶ್ಮೀರದ ಜೊತೆ ಬಿಹಾರವನ್ನೂ ತೆಗೆದುಕೊಳ್ಳಿ: ಕಾಟ್ಜು ವಿರುದ್ಧ ಎಫ್ ಐ ಆರ್
ನಿಮಗೆ ಕಾಶ್ಮೀರವನ್ನು ಬಿಟ್ಟುಕೊಡುತ್ತೇವೆ, ಆದರೆ ಒಂದು ಷರತ್ತು, ಅದರ ಜತೆ ಬಿಹಾರವನ್ನೂ ತೆಗೆದುಕೊಳ್ಳಬೇಕು ಎಂದು ಹೇಳುವ ಮೂಲಕ...
ಪಾಟ್ನಾ: ನಿಮಗೆ ಕಾಶ್ಮೀರವನ್ನು ಬಿಟ್ಟುಕೊಡುತ್ತೇವೆ, ಆದರೆ ಒಂದು ಷರತ್ತು, ಅದರ ಜತೆ ಬಿಹಾರವನ್ನೂ ತೆಗೆದುಕೊಳ್ಳಬೇಕು ಎಂದು ಹೇಳುವ ಮೂಲಕ ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶ ಮಾರ್ಕಂಡೇಯ ಕಾಟ್ಜು ವಿವಾದಕ್ಕೆ ನಾಂದಿ ಹಾಡಿದ್ದಾರೆ.
ಮಾರ್ಕಂಡೇಯ ಕಾಟ್ಜು ಅವರು ತಮ್ಮ ಫೇಸ್ ಬುಕ್ ನಲ್ಲಿ ಹಾಕಿಕೊಂಡಿರುವ ಈ ಪೋಸ್ಟ್ ವಿರುದ್ಧ ಬಿಹಾರ ಜೆಡಿಯು ಶಾಸಕ ಎಫ್ ಐ ಆರ್ ದಾಖಲಿಸಿದ್ದಾರೆ. ಕಾಟ್ಜು ಅವರ ಈ ಹೇಳಿಕೆ ರಾಜ್ಯ, ದೇಶ ಮತ್ತು ಹೊರ ದೇಶದಲ್ಲಿರುವ ಸುಮಾರು 10.5 ಕೋಟಿ ಬಿಹಾರಿಗರಿಗೆ ನೋವುಂಟು ಮಾಡಿದ್ದಾರೆ ಎಂದು ಶಾಸಕ ನೀರಜ್ ಕುಮಾರ್ ತಿಳಿಸಿದ್ದಾರೆ.
ಇದೊಂದು ಪ್ಯಾಕೇಜ್ ಡೀಲ್ ಆಗಿದ್ದು, ಕಾಶ್ಮೀರ ಬೇಕಾದರೇ ಬಿಹಾರವನ್ನು ಜೊತೆಗೆ ತೆಗೆದುಕೊಳ್ಳಬೇಕು . ಕಾಶ್ಮೀರ ಒಂದನ್ನೇ ನೀಡಲು ಸಾಧ್ಯವಿಲ್ಲ ಎಂದು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.