ಪ್ರಧಾನಮಂತ್ರಿ ನರೇಂದ್ರ ಮೋದಿ 
ದೇಶ

ಇಸ್ರೇಲ್ ಮಾಜಿ ಅಧ್ಯಕ್ಷ ಶಿಮಾನ್ ಪೆರೆಸ್ ನಿಧನ: ಪ್ರಧಾನಿ ಮೋದಿ ಸಂತಾಪ

ಇಸ್ರೇಲ್ ಮಾಜಿ ಪ್ರಧಾನಿ ಹಾಗೂ ನೊಬೆಲ್ ಪ್ರಶಸ್ತಿ ಪುರಸ್ಕೃತ ಶಿಮಾನ್ ಪೆರೆಸ್ ಅವರು ನಿಧನ ಹೊಂದಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ಸಂತಾಪ...

ನವದೆಹಲಿ: ಇಸ್ರೇಲ್ ಮಾಜಿ ಪ್ರಧಾನಿ ಹಾಗೂ ನೊಬೆಲ್ ಪ್ರಶಸ್ತಿ ಪುರಸ್ಕೃತ ಶಿಮಾನ್ ಪೆರೆಸ್ ಅವರು ನಿಧನ ಹೊಂದಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ಸಂತಾಪ ಸೂಚಿಸಿದ್ದಾರೆ.

ಭಾರತಕ್ಕೆ ಉತ್ತಮ ಸ್ನೇಹಿತರಾಗಿದ್ದ ಹಾಗೂ ವಿಶ್ವದ ಪ್ರಮುಖ ನಾಯಕರಾಗಿದ್ದ ಮಾಜಿ ಅಧ್ಯಕ್ಷ ಶಿಮೋನ್ ಪೆರೆಸ್ ಅವರನ್ನು ಇಂದು ನಾವು ಕಳೆದುಕೊಂಡಿದ್ದೇವೆ. ಅವರ ಅಗಲಿಕೆಯಿಂದಾಗಿ ಬಹಳ ನೋವಾಗಿದೆ. ಇಸ್ರೇಲ್ ಜನರಿಗೆ ಸಂತಾಪವನ್ನು ಸೂಚಿಸಿತ್ತೇನೆಂದು ಮೋದಿಯವರು ಹೇಳಿದ್ದಾರೆ.

ಕಳೆದೆರಡು ವಾರಗಳ ಹಿಂದಷ್ಟೇ ವಾರ್ಶ್ವವಾಯುವಿಗೆ ತುತ್ತಾಗಿದ್ದ ಶಿಮಾನ್ ಪೆರೆಸ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಶಿಮಾನ್ ಪೆರೆಸ್ ಅವರು ಸಾವನ್ನಪ್ಪಿದ್ದರು.

ಎರಡು ಬಾರಿ ಇಸ್ರೇಲ್ ಅಧ್ಯಕ್ಷರಾಗಿದ್ದ ಪೆರೆಸ್ ಅವರು 2007ರಿಂದ 2014ರವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇದಕ್ಕೂ ಮೊದಲು 1994ರಲ್ಲಿ ಓಸ್ಲೋ ಒಪ್ಪಂದ ಹಾಗೂ ಸ್ವತಂತ್ರ್ಯ ಪ್ಯಾಲೆಸ್ತೀನ್ ಸಂಧಾನದಲ್ಲಿ ಮಹತ್ತರ ಪಾತ್ರವಹಿಸಿದ್ದಕ್ಕಾಗಿ ನೊಬೆಲ್ ಪ್ರಶಸ್ತಿಗೆ ಪೆರೆಸ್ ಭಾಜನರಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಅಮಾಯಕ ಜೀವ ಬಲಿಯಾಗುತ್ತಿವೆ, ಇದು ಸಂಪೂರ್ಣ ಅಸಮರ್ಥನೀಯ’; ಹಡಗು, ನಾವಿಕರ ಮೇಲಿನ ದಾಳಿ ಖಂಡಿಸಿದ EAM Jaishankar

'ಭಯೋತ್ಪಾದಕ ದೇಶ ಕೂಡ ಪ್ರಶ್ನೆ ಕೇಳುತ್ತಿದೆ': ಪಾಕ್ ಪತ್ರಕರ್ತನ ಬೆವರಿಳಿಸಿದ ಎಸ್ ಜೈಶಂಕರ್! Video

ಜಂತರ್ ಮಂತರ್ ಪ್ರತಿಭಟನೆ: ಮಹಿಳೆಯ ಮಾರ್ಫ್ ಮಾಡಿದ ಚಿತ್ರ ತೆಗೆದುಹಾಕಲು Metaಗೆ ಹೈಕೋರ್ಟ್ ಸೂಚನೆ; CJP ನಾಯಕರಿಗೆ ನೋಟಿಸ್

Asian Games 2026: ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಮೂರು ಪದಕ; ಬರಾನಿಕಾ ಎಲಂಗೋವನ್‌ ಐತಿಹಾಸಿಕ ಸಾಧನೆ

ಆಪರೇಷನ್ ಸಿಂಧೂರ್ ಎಫೆಕ್ಟ್: ಬ್ರಹ್ಮೋಸ್ ಕ್ಷಿಪಣಿ ಅಂದಾಕ್ಷಣ ಪಾಕಿಸ್ತಾನ ನಡುಗುತ್ತದೆ; ಗೃಹ ಸಚಿವ ಅಮಿತ್ ಶಾ