ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಧೋನಿ ಗೋಪಾಲ್ ಫೋಟೋ 
ದೇಶ

ತಾಯಿಗೆ ಅಪಮಾನ; ಕತ್ತಿ ಹಿಡಿದು ಹಲ್ಲೆ ಮಾಡಲು ಕಟ್ಟಡ ಹತ್ತಿದ ಯುವಕ!

ತಾಯಿಗೆ ಅಪಮಾನಿ ಕಪಾಳಕ್ಕೆ ಹೊಡೆದರು ಎಂದು ಆರೋಪಿಸಿ ಯುವಕನೋರ್ವ ಕತ್ತಿ ಹಿಡಿದು ಸೇಡು ತೀರಿಸಿಕೊಳ್ಳಲು ಬಹು ಮಹಡಿ ಕಟ್ಟಡ ಹತ್ತಿದ ಪ್ರಸಂಗ ಮಹಾರಾಷ್ಟ್ರದಲ್ಲಿ ಬುಧವಾರ ನಡೆದಿದೆ.

ಥಾಣೆ: ತಾಯಿಗೆ ಅಪಮಾನಿ ಕಪಾಳಕ್ಕೆ ಹೊಡೆದರು ಎಂದು ಆರೋಪಿಸಿ ಯುವಕನೋರ್ವ ಕತ್ತಿ ಹಿಡಿದು ಸೇಡು ತೀರಿಸಿಕೊಳ್ಳಲು ಬಹು ಮಹಡಿ ಕಟ್ಟಡ ಹತ್ತಿದ ಪ್ರಸಂಗ ಮಹಾರಾಷ್ಟ್ರದಲ್ಲಿ ಬುಧವಾರ ನಡೆದಿದೆ.

ಮಹಾರಾಷ್ಟ್ರದ ಥಾಣೆಯಲ್ಲಿ ಈ ಘಟನೆ ನಡೆದಿದ್ದು, ಪ್ರಸ್ತುತ ಕತ್ತಿ ಹಿಡಿದು ನೆರೆಮನೆಯವರ ಮೇಲೆ ಹಲ್ಲೆಗೆ ಮುಂದಾಗಿದ್ದ 20 ವರ್ಷದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸ್  ಮೂಲಗಳ ಪ್ರಕಾರ ಥಾಣೆಯಲ್ಲಿರುವ ಭಯಂದರ್ ಪ್ರದೇಶದ ಹೌಸಿಂಗ್ ಸೊಸೈಟಿ ನಿವಾಸಿಯಾಗಿರುವ ಧೋನಿ ಗೋಪಾಲ್ ಎಂಬ ಯುವಕ ತನ್ನ ತಾಯಿ ಕಪಾಳಕ್ಕೆ ಹೊಡೆದರು ಎಂದು  ಆರೋಪಿಸಿ ನೆರೆಮನೆಯಾಕೆ ಮೇಲೆ ಕತ್ತಿಯಿಂದ ಹಲ್ಲೆ ಮಾಡಲು ಮುಂದಾಗಿದ್ದ. ಈ ವೇಳೆ ಆತನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಪ್ರತ್ಯಕ್ಷ ದರ್ಶಿಗಳ ಪ್ರಕಾರ ಬಂಧಿತ ಧೋನಿ ಗೋಪಾಲ್ ತಾಯಿ ಹಾಗೂ ಅದೇ ಆಪಾರ್ಟ್ ಮೆಂಟ್ ನೆರೆಮನೆಯ ಮತ್ತೋರ್ವ ಮಹಿಳೆ ನಡುವೆ ಕ್ಷುಲ್ಲಕ ವಿಚಾರಕ್ಕೆ ಜಗಳವಾಗಿತ್ತು. ವಾಕ್ಸಮರ  ತಾರಕ್ಕೇರಿ ಮಹಿಳೆ ಧೋನಿ ಗೋಪಾಲ್ ಅವರ ತಾಯಿ ಕಪಾಳಕ್ಕೆ ಹೊಡೆದಿದ್ದಾರೆ. ಈ ವಿಚಾರ ತಿಳಿದ ಮಗ ಧೋನಿ ಗೋಪಾಲ್ ಆಕ್ರೋಶಗೊಂಡು ನೆರೆಮನೆಯಾಕೆ ಮನೆಯ ಬಾಗಿಲು  ಬಡಿದಿದ್ದಾನೆ. ಆದರೆ ಆಕೆ ಬಾಗಿಲು ತೆಗೆಯದ ಹಿನ್ನಲೆಯಲ್ಲಿ ಆತ ಕತ್ತಿ ಹಿಡಿದು ಕಟ್ಟಡವೇರಿ ಆಕೆಯ ಮನೆ ಏರಿ, ಗಲಾಟೆ ಮಾಡಿದ್ದಾನೆ. ಇವಿಷ್ಟೂ ದೃಶ್ಯಾವಳಿಯನ್ನು ಸ್ಥಳೀಯರೊಬ್ಬರು ತಮ್ಮ  ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಇದೀಗ ಈ ವಿಡಿಯೋ ವೈರಲ್ ಆಗಿದೆ.

ಪ್ರಸ್ತುತ ಹಲ್ಲೆ ಆರೋಪದ ಮೇಲೆ ಥಾಣೆ ಪೊಲೀಸರು 20 ವರ್ಷದ ಧೋನಿ ಗೋಪಾಲ್ ನನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್