ದೇಶ

ನಿಷ್ಪ್ರಯೋಜಕ ಸಸ್ಯ, ಬಳ್ಳಿಗಳ ನಿರ್ವಹಣೆಗೆ ಅರಣ್ಯ ಸಚಿವಾಲಯ ಯೋಜನೆ

Sumana Upadhyaya
ನವದೆಹಲಿ: ಭೂಮಿಗೆ ಭಾರವಾದ ನಿಷ್ಪ್ರಯೋಜಕ ಗಿಡ, ಬಳ್ಳಿಗಳನ್ನು ಸರಿಯಾಗಿ ನಿರ್ವಹಣೆ ಮಾಡಿ ಅರಣ್ಯಗಳ ಗುಣಮಟ್ಟವನ್ನು ಕಾಪಾಡಲು ಪರಿಸರ ಮತ್ತು ಅರಣ್ಯ ಸಚಿವಾಲಯ ಕಾರ್ಯಕ್ರಮವೊಂದನ್ನು ರೂಪಿಸಲಿದೆ.
ಅರಣ್ಯಗಳಲ್ಲಿ ಅನಗತ್ಯವಾಗಿ ಬೆಳೆದಿರುವ ಮತ್ತು ಹಬ್ಬಿರುವ ಬಳ್ಳಿ ಮತ್ತು ಗಿಡಗಳನ್ನು ಗುರುತಿಸಿ ವಿಶ್ಲೇಷಿಸಲು ಸಚಿವಾಲಯ ನಿರ್ಧರಿಸಿದ್ದು, ಇದಕ್ಕೆ ಪರಿಸರ ವ್ಯವಸ್ಥೆ ಸುಧಾರಣೆ ಯೋಜನೆ ಎಂದು ಹೆಸರಿಡಲಾಗಿದೆ.(ಇಎಸ್ಐಪಿ) ವಿಶ್ವ ಬ್ಯಾಂಕಿನ ಜಾಗತಿಕ ಪರಿಸರ ವ್ಯವಸ್ಥೆ ನಿಧಿಯನ್ನು ಇದಕ್ಕೆ ಹಣವನ್ನು ಪಡೆಯಲಿದೆ. ಈ ಯೋಜನೆಗೆ ಸುಮಾರು 1.5 ದಶಲಕ್ಷ ಡಾಲರ್ ಹಣದ ಅಗತ್ಯವಿದ್ದು, ಅಂತಹ ಸಸ್ಯ ಪ್ರಭೇದಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡಲು ಅರಣ್ಯದ ಗುಣಮಟ್ಟವನ್ನು ಹೆಚ್ಚಿಸಲು ಸಚಿವಾಲಯ ಮಾದರಿಗಳನ್ನು ಅಭಿವೃದ್ಧಿಪಡಿಸಲಿದೆ.
ಭಾರತದ ಕೇಂದ್ರ ಭಾಗದಲ್ಲಿ 30 ಸಾವಿರ ಹೆಕ್ಟೇರ್ ಪ್ರದೇಶದ ಆಯ್ದ ಭಾಗಗಳಲ್ಲಿ ಅನ್ಯ ಲೋಕದ ಸಸ್ಯ ಪ್ರಭೇದಗಳನ್ನು ನಿಯಂತ್ರಿಸಿ ನಿರ್ವಹಿಸುವ ಕೆಲಸವನ್ನು ಸಂಸ್ಥೆಗೆ ವಹಿಸಲು ಜಾಹೀರಾತು ಪ್ರಕಟಿಸಲಾಗಿದೆ. ಹಂತಹಂತಗಳಲ್ಲಿ ಈ ಕಾರ್ಯವನ್ನು ದೇಶದ ಇತರ ಭಾಗಗಳ ಅರಣ್ಯಗಳಿಗೆ ವಿಸ್ತರಿಸಲಾಗುವುದು ಎಂದು ಪರಿಸರ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
SCROLL FOR NEXT