ಕೊಯಿಮತ್ತೂರು: ಕೆಲ ದಿನಗಳ ಹಿಂದಷ್ಟೇ ಹತ್ಯೆಯಾದ ಹಿಂದೂ ಮುನ್ನಾನಿ ನಾಯಕ ಸಿ ಶಶಿಕುಮಾರ್ ಅವರ ಪತ್ನಿ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಗುರುವಾರ ತಿಳಿದುಬಂದಿದೆ.
ಮನೆಯಲ್ಲಿದ್ದ ಕೆಲ ರಾಸಾಯನಿಕವನ್ನು ಕುಡಿದು ಶಶಿಕುಮಾರ್ ಅವರ ಪತ್ನಿ ಎಸ್. ಜಮುನಾ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆಂದು ಹೇಳಲಾಗುತ್ತಿದೆ.
ಇಂದು ಬೆಳಿಗ್ಗೆ ಜಮುನಾ ಅವರು ಆತ್ಮಹತ್ಯೆಗೆ ಯತ್ನಿಸುತ್ತಿದ್ದಾರ ಶಶಿಕುಮಾರ್ ಅವರ ಸಹೋದರ ಸಿ ಧನ್ಪಾಲ್ ಅವರು ನೋಡಿದ್ದಾರೆ. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಇದೀಗ ಜಮುನಾ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಥುಡಿಯಲೂರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.