ಪ್ರಮುಖ ಆರೋಪಿ ಖಾದರ್ ಖಾನ್ ಮತ್ತು ಆತನ ಸಹಚರ ಅಲಿಖಾನ್ 
ದೇಶ

ಪಾರ್ಕ್ ಸ್ಟ್ರೀಟ್ ಗ್ಯಾಂಗ್ ರೇಪ್ ಪ್ರಕರಣ: ನಾಲ್ಕೂವರೆ ವರ್ಷದ ನಂತರ ಪ್ರಮುಖ ಆರೋಪಿ ಬಂಧನ

ಕೊಲ್ಕೋತಾ ಸೆಷನ್ ಕೋರ್ಟ್ ಶಿಕ್ಷೆ ವಿಧಿಸಿದ 9 ತಿಂಗಳ ನಂತರ ಪಾರ್ಕ್ ಸ್ಟ್ರೀಟ್ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ...

ಕೊಲ್ಕೊತಾ: ಕೊಲ್ಕೋತಾ ಸೆಷನ್ ಕೋರ್ಟ್ ಶಿಕ್ಷೆ ವಿಧಿಸಿದ 9 ತಿಂಗಳ ನಂತರ ಪಾರ್ಕ್ ಸ್ಟ್ರೀಟ್ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಖಾದರ್ ಖಾನ್ ಮತ್ತು ಆತನ ಸಹಚರನನ್ನು ಗ್ರೇಟರ್ ನೋಯ್ಡಾದ ಎನ್ ಸಿಆರ್ ನಲ್ಲಿ ಗುರುವಾರ ರಾತ್ರಿ ಬಂಧಿಸಲಾಗಿದೆ.  ಸಂಬಂಧಿಕರ ಫೋನ್ ಗಳನ್ನು ಟ್ರಾಪ್ ಮಾಡಿದಾಗ ಇಬ್ಬರು ಆರೋಪಿಗಳ ವಿಳಾಸ ಪತ್ತೆಯಾಗಿದೆ. ಗಾಜಿಯಾಬಾದ್ ನ ಮನೆಯೊಂದರಲ್ಲಿ ನಕಲಿ ಹೆಸರುಗಳನ್ನಿಟ್ಟುಕೊಂಡು ಕಳೆದ ನಾಲ್ಕೂವರೆ ವರ್ಷಗಳಿಂದ ವಾಸವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ತಮ್ಮ ಸಂಬಂಧಿಕರೊಬ್ಬರ ನೆರವಿನಿಂದ ಗಾಜಿಯಾಬಾದ್ ನಲ್ಲಿ ಮನೆ ಬಾಡಿಗೆ ಪಡೆದಿದ್ದರು. ಕಳೆದ 10 ದಿನಗಳಿಂದ ಪೊಲೀಸರು ಇವರ ಚಲನವಲನಗಳ ಮೇಲೆ ನಿಗಾ ಇರಿಸಿದ್ದರು.ಗುರುವಾರ ಇಬ್ಬರು ಆರೋಪಿಗಳು ತಮ್ಮ ಸಂಬಂಧ ಹುಟ್ಟುಹಬ್ಬ ಸಮಾರಂಭಕ್ಕೆ ದೆಹಲಿಗೆ ತೆರಳಿ ವಾಪಸ್ ಬರುವಾಗ  ಗಾಜಿಯಾಬಾದ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ.

ತಮ್ಮ ಗುರುತು ಸಿಗದಂತೆ ಅವರು ತಮ್ಮ ವೇಷ ಮರೆ ಮಾಚಿಕೊಂಡಿದ್ದರು ಎನ್ನಲಾಗಿದೆ, ಇಂದು ಅವರನ್ನು ಕೊಲ್ಕೋತಾ ಸೆಷನ್ಸ್ ಕೋರ್ಟ್ ಗೆ ಹಾಜರು ಪಡಿಸಲಾಗಿದೆ.

ಪಾರ್ಕ್ ಸ್ಟ್ರೀಟ್ ಪ್ರಕರಣದ ಎಲ್ಲಾ ಆರೋಪಿಗಳಿಗೂ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಸುಮಿತ್ ಬಜಾಜ್, ಖಾದರ್ ಖಾನ್ ಸಹೋದರ ರುಮಾನ್ ಖಾನ್ ಮತ್ತು ನಾಸೀರ್ ಖಾನ್ ಡಿಸೆಂಬರ್ 11 , 2015 ರಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.

2012 ಫೆಬ್ರವರಿ 2 ರಂಜು ಸುಜೆಟ್ ಜೋರ್ಡಾನ್ ಎಂಬ ಎರಡು ಮಕ್ಕಳ ತಾಯಿಯ ಮೇಲೆ ಐವರು ಪಾರ್ಕ್ ಸ್ಟ್ರೀಟ್ ನ ಚಲಿಸುತ್ತಿದ್ದ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಮಾರ್ಚ್ 13, 2015 ರಂದು ಬಹು ಅಂಗಾಂಗ ವೈಫಲ್ಯದಿಂದ ಆಕೆ ಸಾವನ್ನಪ್ಪಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT