ಗೌರವ್ ಭಾಟಿಯಾ 
ದೇಶ

ಎಸ್ ಪಿ ಮಾಜಿ ವಕ್ತಾರ ಗೌರವ್ ಭಾಟಿಯಾ ಬಿಜೆಪಿ ಸೇರ್ಪಡೆ

ಸಮಾಜವಾದಿ ಪಕ್ಷದ ಮಾಜಿ ವಕ್ತಾರ ಗೌರವ್ ಭಾಟಿಯಾ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

ನವದೆಹಲಿ: ಸಮಾಜವಾದಿ ಪಕ್ಷದ ಮಾಜಿ ವಕ್ತಾರ ಗೌರವ್ ಭಾಟಿಯಾ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. 
ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ತೊರೆದು ಚುನಾವಣೆಗೆ ಸ್ಪರ್ಧಿಸಿದ್ದ ಗೌರವ್ ಭಾಟಿಯಾ, ಅಮಿತ್ ಶಾ ಹಾಗೂ ನರೇಂದ್ರ ಮೋದಿ ಅವರಿಂದ ಆಕರ್ಷಿತಗೊಂಡು ಬಿಜೆಪಿ ಸೇರ್ಪಡೆಗೊಂಡಿರುವುದಾಗಿ ಹೇಳಿದ್ದಾರೆ. 
ಸುಪ್ರೀಂ ಕೋರ್ಟ್ ನ ನ್ಯಾಯವಾದಿಯಾಗಿರುವ ಗೌರವ್ ಭಾಟಿಯಾ, ಸಮಾಜವಾದಿ ಪಕ್ಷ ರಾಮ್ ಮನೋಹರ್ ಲೋಹಿಯಾ ಅವರ ಸಿದ್ಧಾಂತಗಳಿಂದ ದೂರ ಬಂದಿದೆ, ಸಮಾಜವಾದಿ ಪಕ್ಷದಲ್ಲಿ ನಿಷ್ಠರಿಗೆ ಬೆಲೆ ಇಲ್ಲ. ಅದು ಕೇವಲ ವಂಶ ಪಾರಂಪರ್ಯ ರಾಜಕಾರಣ ನಡೆಯುತ್ತಿದೆ ಎಂದು ಗೌರವ್ ಭಾಟಿಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
ಫೆ.5 ರಂದು ಗೌರವ್ ಭಾಟಿಯಾ ಸಮಾಜವಾದಿ ಪಕ್ಷದ ವಕ್ತಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭುಪೇಂದ್ರ ಯಾದವ್ ಅವರ ನೇತೃತ್ವದಲ್ಲಿ ಗೌರವ್ ಭಾಟಿಯಾ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕರ್ನಾಟಕ ನಾಯಕತ್ವ ಬದಲಾವಣೆಯ ನಡುವೆ CM ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮತ್ತೆ ದೆಹಲಿಗೆ

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಶನಿವಾರ; ತದನಂತರ ನೂತನ ಸಿಎಂ ಪದಗ್ರಹಣ ಸಾಧ್ಯತೆ!

ಕ್ರೇಜಿಸ್ಟಾರ್ ರವಿಚಂದ್ರನ್ ವಿರುದ್ಧವೇ ಅತ್ಯಾಚಾರ ಯತ್ನ ಆರೋಪ, ಮಾನನಷ್ಟ ಮೊಕದ್ದಮೆ: ಕಣ್ಣೀರಿಟ್ಟು ಕ್ಷಮೆ ಕೇಳಿದ 'ಹಳ್ಳಿಮೇಷ್ಟ್ರು' ನಟಿ Bindiya!

Karnataka CM News LIVE Updates | ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ದೆಹಲಿಗೆ ಪ್ರಯಾಣ; ಸಿಎಲ್‌ಪಿ ಸಭೆ ಶನಿವಾರ ಸಾಧ್ಯತೆ!

ವೀರೇಂದ್ರ ಪಾಟೀಲರಿಗೆ ಅಪ್ಪ, ಸಿದ್ದರಾಮಯ್ಯರಿಗೆ ಮಗ ಅಪಮಾನ: ರಾಹುಲ್ ವಿರುದ್ಧ ಪ್ರಲ್ಹಾದ ಜೋಶಿ ಕಿಡಿ!

SCROLL FOR NEXT