ಬಾರಿಪಾದಾ: ಒಡಿಶಾದ ಬಾರಿಪಾದಾ ಜಗನ್ನಾಥ ದೇವಾಲಯದ ಒಳಗೆ ಕಾಮುಕನೊಬ್ಬ ಅಪ್ರಾಪ್ತ ಅಂಗವಿಕಲ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಮಾಡಿರುವ ಘಟನೆಯೊಂದು ಶುಕ್ರವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಶುಕ್ರವಾರ ರಾತ್ರಿ 11 ವರ್ಷದ ಅಪ್ರಾಪ್ತ ಅಂಗವಿಕಲ ಬಾಲಕಿಯೊಬ್ಬಳು ದೇವರ ದರ್ಶನ ಪಡೆಯಲು ದೇಗುಲದ ಒಳಗೆ ಹೋಗಿದ್ದಾಳೆ. ದೇಗುವ ಬಾಗಿಲು ಮುಚ್ಚುವ ವೇಳೆ ಬಾಲಕಿಯನ್ನು ಹೊತ್ತೊಯ್ದಿರುವ ಕಾಮುಕ ದೇವರ ಸ್ನಾನದ ಕೊಳದ ಬಳಿ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಕೆಲ ಜನರು ಬಾಲಕಿಯನ್ನು ಗುರ್ತಿಸಿದ್ದಾರೆ. ಕೂಡಲೇ ಕಾಮುಕನನ್ನು ಥಳಿಸಿ ಪೊಲೀಸರ ವಶಕ್ಕೆ ನೀಡಿದ್ದಾರೆ.
ಪ್ರಸ್ತುತ ಬಾಲಕಿ ಎಸ್'ಸಿಬಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬಾಲಕಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಬಾರಿಪಾದಾ ಕಲೆಕ್ಟರ್ ಎಸ್.ಕೆ ಪುರೋಹಿತ್ ಜೊತೆಗೆ ಹಿರಿಯ ಪೊಲೀಸ್ ಅಧಿಕಾರಿಘಳು ಆಸ್ಪತ್ರೆಗೆ ಭೇಟಿ ನೀಡಿದ್ದು, ಬಾಲಕಿಯ ಚಿಕಿತ್ಸೆಗಾಗಿ ರೂ.10,000 ಹಣವನ್ನು ಬಿಡುಗಡೆ ಮಾಡಿದ್ದಾರೆ.
ಇನ್ನು ಘಟನೆಗೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ನೂರಾರು ಸಂಖ್ಯೆಯಲ್ಲಿ ಜನರು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.