ದೇಶ

ಲೋಕಪಾಲ್ ಕುರಿತು ಜೇಟ್ಲಿ ಸಂಸತ್ ನ್ನು ದಾರಿ ತಪ್ಪಿಸುತ್ತಿದ್ದಾರೆ: ಕಾಂಗ್ರೆಸ್ ಆರೋಪ

Srinivas Rao BV
ನವದೆಹಲಿ: ಲೋಕಪಾಲ ನೇಮಕದ ವಿಷಯವಾಗಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಲೋಕಸಭೆಯನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. 
ಕಾಂಗ್ರೆಸ್ ನಾಯಕ ಕೆಸಿ ವೇಣುಗೋಪಾಲ್ ಅರುಣ್ ಜೇಟ್ಲಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಲೋಕಪಾಲ ತಿದ್ದುಪಡಿ ಲೋಕಸಭೆಯ ಸಂಸದೀಯ ಸಮಿತಿಯಲ್ಲೇ ಉಳಿದಿದೆ. ಆದ್ದರಿಂದ ಲೋಕಪಾಲ ನೇಮಕಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸೂಕ್ತ ಬದಲಾವಣೆ ಮಾಡಲು ಸಾಧ್ಯವಾಗುತಿಲ್ಲ ಎಂದು ಹೇಳುವ ಮೂಲಕ ಜೇಟ್ಲಿ ಸದನದ ದಾರಿ ತಪ್ಪಿಸುತ್ತಿದ್ದಾರೆ ಎಂದು ವೇಣುಗೋಪಾಲ್ ಆರೋಪಿಸಿದ್ದಾರೆ.
ಮಾ.29 ರಂದೂ ಸಹ ಸದನದಲ್ಲಿ ಇದೇ ವಿಷಯ ಚರ್ಚೆಯಾಗಿತ್ತು. ಆಗ ಪ್ರತಿಕ್ರಿಯೆ ನೀಡಿದ್ದ ಅರುಣ್ ಜೇಟ್ಲಿ, ಸಂಸತ್ ಸ್ಥಾಯಿ ಸಮಿತಿಯಲ್ಲಿ ತಿದ್ದುಪಡಿ ಮಸೂದೆ ಬಾಕಿ ಇದೆ. ಸ್ಥಾಯಿ ಸಮಿತಿ ನೀಡುವ ವರದಿಯ ಪ್ರಕಾರ ಲೋಕಪಾಲ ನೇಮಕ ಮಾಡುತ್ತೇವೆ ಎಂದು ಹೇಳಿದ್ದರು. ಈಗ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅರುಣ್ ಜೇಟ್ಲಿ ವಿರುದ್ಧ ನಿಲುವಳಿ ಸೂಚನೆ ಮಂಡಿಸಿರುವ ವೇನುಗೋಪಾಲ್, ಜೇಟ್ಲಿ ಸದನದ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 
SCROLL FOR NEXT