ದೇಶ

ಗೋಮಾಂಸ ಸೇವನೆ ಜೀವನ ಶೈಲಿಯ ಆಯ್ಕೆ, ನಿಷೇಧ ಅಸಾಧ್ಯ: ಅಲಹಬಾದ್ ಹೈಕೋರ್ಟ್

Lingaraj Badiger
ಅಲಹಬಾದ್: ಗೋಮಾಂಸ ನಿಷೇಧ ವ್ಯಾಪಾರಿಗಳ ಮೇಲೆ ಮತ್ತು ಗ್ರಾಹಕರ ಮೇಲೆ ಪರಿಣಾಮ ಬೀರುವುದರಿಂದ ಯಾರೂ ಅದನ್ನು ಸಂಪೂರ್ಣ ನಿಷೇಧಿಸಲು ಸಾಧ್ಯವಿಲ್ಲ ಎಂದು ಬುಧವಾರ ಅಲಹಬಾದ್ ಹೈಕೋರ್ಟ್ ಹೇಳಿದೆ.
ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಉತ್ತರ ಪ್ರದೇಶದಲ್ಲಿ ಅಕ್ರಮ ಕಸಾಯಿಖಾನೆಗಳ ಬಂದ್ ಮಾಡುತ್ತಿರುವ ಬೆನ್ನಲ್ಲೇ ಹೈಕೋರ್ಟ್ ನ ಈ ಆದೇಶ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.
ಈ ಹಿಂದೆ ಸರ್ಕಾರ ನಿಷ್ಕ್ರಿಯವಾಗಿತ್ತು ಎಂಬ ಕಾರಣಕ್ಕೆ ರಾಜ್ಯದಲ್ಲಿ ಗೋಮಾಂಸವನ್ನು ಸಂಪೂರ್ಣವಾಗಿ ನಿಷೇಧಿಸಲು ಸಾಧ್ಯವಿಲ್ಲ ಎಂದು ಸಹ ಕೋರ್ಟ್ ಹೇಳಿದೆ.
ಗೋಮಾಂಸ ಸೇವನೆ ಅವರವರ ಜೀವನ ಶೈಲಿಯ ಆಯ್ಕೆಯಾಗಿದ್ದು, ಅವರಿಗೆ ಬೇಕಾದ ಆಹಾರ ಸೇವನೆ ಜಾತ್ಯತೀತ ಸಂಸ್ಕೃತಿಯ ಒಂದು ಭಾಗ ಮತ್ತು ಜೀವನದ ಅವಶ್ಯಕ ಭಾಗವಾಗಿದ್ದು. ಇದು ಬದುಕುವ ಹಕ್ಕು ಮತ್ತು ಜೀವನದೊಂದಿಗೆ ಸಂಪರ್ಕ ಹೊಂದಿದೆ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ. ಅಲ್ಲದೆ ಕಸಾಯಿಖಾನೆ ವಿವಾದ ಶೀಘ್ರ ಬಗೆಹರಿಸಿಕೊಳ್ಳುವಂತೆ ಮತ್ತು ಪರವಾನಗಿಗಳನ್ನು ನವೀಕರಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
SCROLL FOR NEXT