ನವದೆಹಲಿ: ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಏರ್ ಇಂಡಿಯಾ ಹಾಗೂ ಇಂಡಿಗೋ ವಿಮಾನ ಪರಸ್ಪರ ಎದುರಾಗಿ ಸಂಭವಿಸಬಹುದಾಗಿದ್ದ ಸಂಭವನೀಯ ಮುಖಾಮುಖಿ ಡಿಕ್ಕಿ ಅದೃಷ್ಟವಶಾತ್ ತಪ್ಪಿದೆ.
ಇಂದು ಬೆಳಗ್ಗೆ 11.15ಕ್ಕೆ ಏರ್ ಇಂಡಿಯಾದ ದೆಹಲಿ-ಗೋವಾ ಎಐ 156 ಮಾನ 28ನೇ ರನ್ ವೇನಿಂದ ಟೇಕ್ ಆಫ್ ಆಗಬೇಕಿತ್ತು. ಆದರೆ ಇದೇ ವೇಳೆಗೆ ಇಂಡಿಗೋದ ರಾಂಚಿ-ದೆಹಲಿ 6ಇ398 ವಿಮಾನ ಲ್ಯಾಂಡ್ ಆಗುತ್ತಿದ್ದರಿಂದ ತಕ್ಷಣ ವಿಮಾನ ಟೇಕ್ ಆಫ್ ಮಾಡದೆ ವಾಪಸ್ ಬರುವಂತೆ ಏರ್ ಟ್ರಾಫಿಕ್ ನಿಯಂತ್ರಕರು ಏರ್ ಇಂಡಿಯಾ ವಿಮಾನದ ಪೈಲಟ್ ಗೆ ಸೂಚಿಸಿದ್ದಾರೆ. ಇದರಿಂದಾಗಿ ಭಾರಿ ಅವಘಡವೊಂದು ತಪ್ಪಿದಂತಾಗಿದೆ.
ಅಂತಿಮವಾಗಿ ಏರ್ ಇಂಡಿಯಾ ವಿಮಾನ ಮಧ್ಯಾಹ್ನ 12.50ಕ್ಕೆ ಟೇಕ್ ಆಫ್ ಆಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics