ಚೆನ್ನೈ: ತಾನು ಜಯಲಲಿತಾ ಮಗ ಎಂದು ಹೇಳಿಕೊಂಡು ಮದ್ರಾಸ್ ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದ ಜೆ. ಕೃಷ್ಣಮೂರ್ತಿ ಎಂಬಾತನನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.
ಮದ್ರಾಸ್ ಹೈಕೋರ್ಟ್ ನಿರ್ದೇಶನದಂತೆ ಸಿಸಿಬಿ ಪೊಲೀಸರು ದಿಂಡಿಗಲ್ ಬಸ್ ನಿಲ್ದಾಣದಲ್ಲಿ ಶುಕ್ರವಾರ ಕೃಷ್ಣಮೂರ್ತಿಯನ್ನು ಬಂಧಿಸಿದ್ದಾರೆ.
ಮಾರ್ಚ್ 27 ರಂದು ಕಷ್ಣ ಮೂರ್ತಿಯನ್ನು ಬಂಧಿಸುವಂತೆ ಮದ್ರಾಸ್ ಹೈಕೋರ್ಟ್ ನಿರ್ದೇಶನ ನೀಡಿದ ಮೇಲೆ, ಆತ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಬಸ್ ನಲ್ಲಾ ಸಂಚರಿಸುತ್ತಿದ್ದನು. ಏಪ್ರಿಲ್ 10 ಒಳಗೆ ಕೃಷ್ಣ ಮೂರ್ತಿಯನ್ನು ಕೋರ್ಟ್ ಮುಂದೆ ಹಾಜರು ಪಡಿಸಬೇಕು ಎಂದು ನ್ಯಾಯಮೂರ್ತಿ ಆರ್. ಮಹಾದೇವನ್ ಆದೇಶಿಸಿದ್ದರು.
ವಕೀಲರ ಜೊತೆ ಊಟ ಮುಗಿಸಿ ಹೋಟೆಲ್ ಮುಂದೆ ನಿಂತಿದ್ದಾಗ ಸಿಸಿಬಿ ಪೊಲೀಸ್ ಇನ್ಸ್ ಪೆಕ್ಟರ್ ಆನಂದ್ ಬಾಬು ನೇತೃತ್ವದ ತಂಡ ಕೃಷ್ಣ ಮೂರ್ತಿಯನ್ನು ಬಂಧಿಸಿದೆ.