ಚೆನ್ನೈ: ನಟ, ರಾಜಕಾರಣಿ ಶರತ್ ಕುಮಾರ್ ಅವರ ನಿವಾಸದ ಮೇಲೆ ಐಟಿ ದಾಳಿ ನಡೆಸಿದ ನಾಲ್ಕೆ ದಿನಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಮಂಗಳವಾರ ಅವರ ಪತ್ನಿ ರಾಧಿಕಾ ಅವರ ನಿವಾಸದ ಮೇಲೆ ದಾಳಿ ಮಾಡಿದ್ದಾರೆ.
ವರದಿಗಳ ಪ್ರಕಾರ ಐಟಿ ಅಧಿಕಾರಿಗಳು ತಮಿಳು ನಾಡಿನ ಹಲವಾರು ವಿವಿಐಪಿಗಳ ನಿವಾಸದ ಮೇಲೆ ದಾಳಿ ನಡೆಸಿರುವುದಾಗಿ ತಿಳಿದು ಬಂದಿದೆ.
ನಟಿ ರಾಧಿಕಾ ಶರತ್ ಕುಮಾರ್ ಅವರ ರಡಾನ್ ಮೀಡಿಯಾ ನೆಟ್ ವರ್ಕ್ ಮೇಲೂ ದಾಳಿ ನಡೆಸಲಾಗಿದೆ, ಈ ಹಿಂದೆಯೇ ಐಟಿ ಅಧಿಕಾರಿಗಳ ಸ್ಕ್ಯಾನರ್‌ಗೆ ಒಳಪಟ್ಟಿದ್ದ ಶರತ್ ಕುಮಾರ್ - ರಾಧಿಕಾ ಅವರ ನಿವಾಸವನ್ನು ಶೋಧಿಸಿದ್ದಾರೆ.
ಕಳೆದ ವಾರದಲ್ಲಿ ತಮಿಳು ನಾಡು ಆರೋಗ್ಯ ಮಂತ್ರಿ ವಿಜಯಭಾಸ್ಕರ್, ಮಾಜಿ ಸಂಸದ ಸಿ ರಾಜೇಂದ್ರನ್ ಮತ್ತು ಎಂಜಿಆರ್ ಮೆಡಿಕಲ್ ಯುನಿವರ್ಸಿಟಿ ವಿಸಿ ಡಾ. ಗೀತಾಲಕ್ಷೀ ಅವರ ನಿವಾಸಗಳ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.
ಆರ್ ನಗರ ಉಪಚುನಾವಣೆಯಲ್ಲಿ ಶಶಿಕಲಾ ಬಣದ ಎಐಎಡಿಎಂಕೆ ಅಭ್ಯರ್ಥಿ ಟಿ ಟಿ ವಿ ದಿನಕರನ್ ಅವರ ಪರವಾಗಿ ಅಪಾರ ಮೊತ್ತದ ಹಣವನ್ನು ಬಳಸಲಾಗಿದೆ ಎಂಬ ಮಾಧ್ಯಮ ವರದಿಗಳನ್ನು ಆಧರಿಸಿ ಐಟಿ ಅಧಿಕಾರಿಗಳು ತಮಿಳು ನಾಡಿನ ವಿವಿಐಪಿ ಗಳ ನಿವಾಸಗಳ ಮೇಲೆ ದಾಳಿ ನಡೆಸುತ್ತಿರುವುದಾಗಿ ತಿಳಿದು ಬಂದಿದೆ. ಶಶಿಕಲಾ ಬಣದ ಎಐಎಡಿಎಂಕೆ ಅಭ್ಯರ್ಥಿ ಟಿಟಿವಿ ದಿನಕರನ್ ಶರತ್ ಕುಮಾರ್ ಅವರಿಗೆ ಬೆಂಬಲ ವ್ಯಕ್ತ ಪಡಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos