ನಾಗ್ಪುರ: ಸಮಾಜದ ಹಲವು ವರ್ಗಗಳ ಜನ ಭಯದಲ್ಲಿ ಬದುಕು ಸಾಗಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿದ್ಯಾರ್ಥಿ ಮುಖಂಡ ಕನ್ಹಯ್ಯ ಕುಮಾರ್ ಹೇಳಿದ್ದಾರೆ.
ಪತಂಜಲಿ ಬ್ರಾಂಡ್ ನ ಫೇಸ್ ವಾಶ್ ಬಳಕೆ ಮಾಡದಿದ್ದರೇ ಅಂಥವರಿಗೆ ದೇಶ ವಿರೋಧಿಗಳು ಎಂಬ ಹಣೆ ಪಟ್ಟಿ ಸಂದರ್ಭ ಎದುರಾಗಿದೆ ಎಂದು ಹೇಳಿದ್ದಾರೆ.
ಡಾ. ಅಂಬೇಡ್ಕರ್ ಜಯಂತಿ ಅಂಗವಾಗಿ ಬಿಹಾರ್ ತೆ ತಿಹಾರ್ ಕಾರ್ಯಕ್ರಮದಲ್ಲಿ ತನ್ನ ಮರಾಠಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಕನ್ಹಯ್ಯ, ಯೋಗಗುರು ಬಾಬಾ ರಾಮದೇವ್ ಅವರ ಪತಂಜಲಿ ಫೇಸ್ ವಾಶ್ ಬಳಸದಿದ್ದರೇ ಅವರು ದೇಶ ವಿರೋಧಿಗಳು ಎಂದು ಘೋಷಿಸುತ್ತಾರೆ. ದೇಶದಲ್ಲಿ ಜನ ಭಯದಲ್ಲಿ ಬದುಕುವಂತಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಬಾಬಾಸಾಹೇಬ್ ಅಂಬೇಡ್ಕರ್ ಸಮಾಜದ ಎಲ್ಲಾ ವರ್ಗದ ಜನರಿಗೆ ಹಲವು ರೀತಿಯಲ್ಲಿ ಸ್ವತಂತ್ರ್ಯ ಸಿಗಲಿ ಎಂಬ ಕಾರಣಕ್ಕಾಗಿ ಸಂವಿಧಾನ ರಚಿಸಿದರು, ಆದರೆ ಇಷ್ಟು ದೊಡ್ಡ ಸಮಾಜದಲ್ಲಿ ಅವರ ಬಯಕೆಯಂತೆ ಸ್ವಾತಂತ್ರ್ಯ ಸಿಗುತ್ತಿಲ್ಲ, ಇಂದಿನ ಸಮಾಜದಲ್ಲಿ ಮಹಿಳೆಯರು, ಬಡವರು, ದಲಿತರು, ಹಿಂದುಳಿದ ವರ್ಗಗಳು, ಬಡುಕಟ್ಟು ಜನರು ಹಾಗೂ ಬುದ್ಧಿ ಜೀವಿಗಳೆಲ್ಲರೂ ಭಯದಲ್ಲೇ ಬದುಕುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics